4:49 PM Tuesday 18 - November 2025

ಪೊಲೀಸರ ನಿದ್ದೆಗೆಡಿಸಿದ ‘ಮಸೀದಿಯಲ್ಲಿ ಬಾಂಬ್ ಇದೆ’ ಎಂಬ ಫೋನ್ ಕರೆ

phone call
06/07/2023

ಬೆಂಗಳೂರು: ಭಯೋತ್ಪಾದಕರು ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂಬ ಫೋನ್ ಕರೆಯು ಇದೀಗ ಬೆಂಗಳೂರಿನ ಪೊಲೀಸರ ನಿದ್ದೆಗೆಡಿಸಿದೆ.

ಬುಧವಾರ ತಡರಾತ್ರಿ  ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಿವಾಜಿನಗರದ ಅಜಾಂ ಮಸೀದಿಯಲ್ಲಿ ಭಯೋತ್ಪಾದಕರು ಬಾಂಬ್ ಇಟ್ಟಿದ್ದಾರೆಂದು ಕಿಡಿಗೇಡಿಯೊಬ್ಬ ಕರೆ ಮಾಡಿ ಕಾಲ್‌ ಕಟ್‌ ಮಾಡಿದ್ದಾನೆ.

ಹೀಗೆ ಬಂದ ಅನಾಮಧೇಯ ಕರೆಯೊಂದು ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದೆ. ಪೊಲೀಸ್‌ ಸಹಾಯವಾಣಿ 112 ಸಹಾಯವಾಣಿಗೆ ಕರೆ ಮಾಡಿದ ನಂತರ ಮಸೀದಿಗೆ ದೌಡಾಯಿಸಿದ ಶಿವಾಜಿನಗರದ ಪೊಲೀಸರು  ಮಸೀದಿಯ ಮೂಲೆ ಮೂಲೆಯನ್ನೂ ಪರಿಶೀಲನೆ ಮಾಡಿದ್ದಾರೆ.

ಬಳಿಕ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ಇಡೀ ಮಸೀದಿಯನ್ನು  ಪರಿಶೀಲನೆ ಮಾಡಿದ ಬಳಿಕ ಬಾಂಬ್‌ ಸಿಗಲಿಲ್ಲವಾದಾಗ ಇದೊಂದು ಅನಾಮಧೇಯ ವ್ಯಕ್ತಿಯ ಕಿಡಿಗೇಡಿ ಕೃತ್ಯ ಎಂದು ಗೊತ್ತಾಗಿದ್ದು,ಸುಳ್ಳು ಕರೆ ಮಾಡಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಿಡಿಗೇಡಿ ಪೊಲೀಸರಿಗೆ ಕರೆ ಮಾಡಿರೋದು ಗೊತ್ತಾಗಿದ್ದು, ಅನಾಮಧೇಯ ಕರೆಯ ಭಯ ಹುಡುಕಾಟ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


ಸದನದಲ್ಲಿ ಜಟಾಪಟಿ | LIVE VIDEO

ಇತ್ತೀಚಿನ ಸುದ್ದಿ

Exit mobile version