3:09 AM Saturday 25 - October 2025

ಬ್ಯಾಂಕ್ ಸಿಬ್ಬಂದಿಯಂತೆ ಬಂದು 5 ಲಕ್ಷ ಹೊತ್ತೊಯ್ದ ಕಳ್ಳ!

thief
18/10/2023

ಚಾಮರಾಜನಗರ: ಬ್ಯಾಂಕ್ ಗೆ ಸಿಬ್ಬಂದಿ ರೀತಿ ಬಂದು ರಾಜಾರೋಷವಾಗಿಯೇ 5 ಲಕ್ಷ ಹಣ ಕದ್ದೊಯ್ದಿರುವ ಘಟನೆ ಚಾಮರಾಜನಗರದ ಕೆನೆರಾ ಬ್ಯಾಂಕಿನಲ್ಲಿ ಇಂದು ಬೆಳಗ್ಗೆ 12ರ ಹೊತ್ತಿಗೆ ನಡೆದಿದೆ.

ಚಾಮರಾಜನಗರ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಈ ಕಳವು ಪ್ರಕರಣ ನಡೆದಿದೆ. ಚಾಲಾಕಿ ಕಳ್ಳ ಟಿಪ್ ಟಾಪ್ ಆಗಿ,ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಷ್ ಕೌಂಟರ್ ಗೆ ಬಂದು  ಯಾವುದೇ ಆತಂಕವಿಲ್ಲದೆ ಐದು ಲಕ್ಷ ರೂಪಾಯಿ ಎಗರಿಸಿ ಬಂದ ದಾರಿಯಲ್ಲಿ ವಾಪಸ್ ತೆರಳಿದ್ದಾನೆ.

ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ವರ್ತಿಸಿದ್ದರಿಂದ ಇತರರಿಗೆ ಯಾವುದೇ ಅನುಮಾನ ಬಂದಿಲ್ಲ, ಜನರ ನಡುವೆಯೇ ಕಳ್ಳ ಕರಾಮತ್ತು ತೋರಿದ್ದು  ಕಳ್ಳನ ಮೋಸದಾಟಕ್ಕೆ ಬ್ಯಾಂಕ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

5 ಲಕ್ಷ ರೂಪಾಯಿ ಬಂಡಲ್ ಹಿಡಿದು ಆರಾಮಾಗಿ ಹೊರಬಂದಿರುವ ಭೂಪನಿಗೆ ಇತರ ಮೂವರು ಸಹಕಾರ ನೀಡಿರುವುದು  ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ

ಇತ್ತೀಚಿನ ಸುದ್ದಿ

Exit mobile version