4:19 PM Thursday 29 - January 2026

ಆಟ ಆಡುತ್ತಿದ್ದಾಗ ಬಂತು ಹಾವು: ಕಚ್ಚಿ ಕೊಂದ 3 ರ ಪೋರ..!

05/06/2023

ಈ ಬಾಲಕ ಅಂತಿಂಥವನಲ್ಲ. ತಾನು ಆಟ ಆಡುತ್ತಿದ್ದಾಗ ಬಂದ ಹಾವನ್ನು ಮೂರು ವರ್ಷದ ಬಾಲಕನೊಬ್ಬ ಕಚ್ಚಿ ಕೊಂದು ಹಾಕಿದ ಘಟನೆಯು ಉತ್ತರ ಪ್ರದೇಶದ ಫಾರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕ ಅಕ್ಷಯ್ ಮನೆ ಮುಂದೆ ಆಡುತ್ತಿದ್ದಾಗ ಸಣ್ಣ ಹಾವು ಎದುರಿಗೆ ಬಂದಿದೆ. ಇದನ್ನು ನೋಡಿದ ಅಕ್ಷಯ್, ಕೈಯಲ್ಲಿ ಹಿಡಿದು ಬಾಯಿಗೆ ಹಾಕಿ ಕಚ್ಚಿದ್ದಾನೆ. ನಂತರ ಜೋರಾಗಿ ಅಳ ತೊಡಗಿದ್ದಾನೆ. ಏನಾಯ್ತು ಎಂದು ಅಜ್ಜಿ ಮನೆಯೊಳಗಿಂದ ಬಂದು ನೋಡಿದಾಗ ಅಕ್ಷಯ್ ಬಾಯಲ್ಲಿ ಹಾವು ಕಂಡು ಆಘಾತಗೊಂಡಿದ್ದಾರೆ.

ಕೂಡಲೇ ಎಚ್ಚೆತ್ತ ಅಜ್ಜಿ, ಹಾವನ್ನು ತೆಗೆದು ಎಸೆದ ನಂತರ ಬಾಲಕನ ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಾಲಕನ ಅಜ್ಜಿ ಸುನೀತಾ, ಅಕ್ಷಯ್ ಬಾಯಿಯಿಂದ ಹಾವನ್ನು ಹೊರತೆಗೆದೆ. ನಂತರ ಆತನ ಬಾಯಿಯನ್ನು ನೀರಿನಿಂದ ತೊಳೆದು ಪೋಷಕರಿಗೆ ತಿಳಿಸಿದೆ. ಗಾಬರಿಗೊಂಡ ಪೋಷಕರು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದರು.

ಬಾಲಕನಿಗೆ ಅಗತ್ಯ ಔಷಧಿ ನೀಡಲಾಗಿದೆ. ಜೀವಕ್ಕೆ ಯಾವುದೇ ಅಪಾಯವಿಲ್ಲ. ಆರೋಗ್ಯವಾಗಿದ್ದಾನೆ. ಹೀಗಾಗಿ ತಪಾಸಣೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯ ಮೊಹಮ್ಮದ್ ಸಲೀಂ ಅನ್ಸಾರಿ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version