ಸರ್ಕಾರಿ ನೌಕರಿ ಸಿಗುತ್ತಿದ್ದಂತೆಯೇ ಪತಿಯನ್ನು ಬಿಟ್ಟು ಬೇರೊಬ್ಬನ ಕೈಹಿಡಿದ ಮಹಿಳೆ!: ಪತಿ ಕಂಗಾಲು

zhansi
11/07/2024

ಝಾನ್ಸಿ:  ಸರ್ಕಾರಿ ನೌಕರಿ ಸಿಗುತ್ತಿದ್ದಂತೆಯೇ ಮಹಿಳೆಯೊಬ್ಬಳು ಪತಿಯನ್ನು ತೊರೆದು ಮತ್ತೊಬ್ಬನ ಜೊತೆಗೆ ಮದುವೆ ಮಾಡಿಕೊಂಡಿರುವ ಘಟನೆಯೊಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಪತ್ನಿ ಮಾಡಿದ ಕೆಲಸದಿಂದ ಕಂಗಾಲಾಗಿರುವ  ಪತಿ ಇದೀಗ ಎಲ್ಲಿದ್ದರೂ ತನ್ನ ಮನೆಗೆ ಬರುವಂತೆ ಪತ್ನಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾನೆ.

ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದ ನೀರಜ್ ವಿಶ್ವಕರ್ಮ ಎಂಬಾತ ಐದು ವರ್ಷಗಳ ಹಿಂದೆ ರೀಚಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ.  ಇಬ್ಬರ ಸಂಬಂಧವೂ ಚೆನ್ನಾಗಿಯೇ ಹೋಗುತ್ತಿದ್ದ ಸಂದರ್ಭದಲ್ಲೇ ರೀಚಾಗೆ ಅಕೌಂಟೆಂಟ್ ಆಗಿ ಸರ್ಕಾರಿ ಉದ್ಯೋಗ ದೊರಕಿತ್ತು.

ಜನವರಿ 18ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದ ರೀಚಾ ವಾಪಸ್ ಬಂದಿರಲಿಲ್ಲ.  ಆ ಬಳಿಕ ಪತ್ನಿಗೆ ಸರ್ಕಾರಿ ಉದ್ಯೋಗ ದೊರೆತಿರುವ ವಿಷಯ ತಿಳಿದ ನೀರಜ್ ಆಕೆ ಅಪಾಯಿಂಟ್ ಮೆಂಟ್ ಆರ್ಡರ್ ಪಡೆಯಲು ಬರುವ ದಿನ ಕಚೇರಿ ಬಳಿ ಹೋಗಿದ್ದಾರೆ. ಆದರೆ ಆಕೆ ಅಪಾಯಿಂಟ್ ಮೆಂಟ್ ಪಡೆದು ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿದ್ದಳು.

ಪತ್ನಿಯನ್ನು ಮನೆಗೆ ಕರೆತರಲು ನೀರಜ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಎಲ್ಲವೂ ವಿಫಲವಾಯಿತು. ಈ ನಡುವೆ ಆಕೆ ಮತ್ತೊಂದು ವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ನೊಂದ ಪತಿ ಇದೀಗ ಮನೆಗೆ ಬರುವಂತೆ ಪತ್ನಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version