12:24 AM Tuesday 9 - December 2025

ಮಹಿಳೆಯ ಮೇಲೆಯೇ ರೈಲು ಹರಿದರೂ, ಆರಾಮವಾಗಿ ಎದ್ದು ಬಂದ ಮಹಿಳೆ

18/02/2021

ರೋಹ್ಟಕ್: ತನ್ನ ಮೇಲೆ ರೈಲು ಹರಿದರೂ ಮಹಿಳೆ ಜೀವಂತವಾಗಿ ಹೊರ ಬಂದ ಘಟನೆ ಹರ್ಯಾಣದ ರೋಹ್ಟಕ್ ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲು ಬರುವುದರೊಳಗೆ ಅತ್ತ ಕಡೆಗೆ ದಾಟಬೇಕು ಎಂದು ಮಹಿಳೆ ಪ್ರಯತ್ನಿಸಿದ್ದಾಳೆ ಆದರೆ, ಅದರೊಳಗೆ ರೈಲು ಹೊರಟಿದೆ.

ಸಿಗ್ನಲ್ ಗಾಗಿ ರೈಲು ಚಾಲಕ ಕಾಯುತ್ತಿದ್ದ. ಸಿಗ್ನಲ್ ಬಾರದ ಹಿನ್ನೆಲೆಯಲ್ಲಿ ರೈಲು ನಿಂತಿದೆ ಎನ್ನುವುದನ್ನು ಗಮನಿಸದೇ ಮಹಿಳೆಯು  ಹಳಿ ದಾಟಲು ಯತ್ನಿಸಿದ್ದಾರೆ. ಈ ವೇಳೆ ರೈಲು ಚಲಿಸಿದ್ದು, ಇದರಿಂದ ಭೀತಳಾದ ಮಹಿಳೆ ಏನು ಮಾಡಬೇಕು ಎನ್ನುವುದು ತೋಚದೇ ರೈಲಿನ ಹಳಿಗಳ ನಡುವೆ ಮಲಗಿದ್ದಾರೆ. ಹೀಗಾಗಿ ಮಹಿಳೆ ಸುರಕ್ಷಿಯವಾಗಿ ಹೊರ ಬಂದಿದ್ದಾರೆ.

60 ವರ್ಷದ ಮಹಿಳೆ ಆಗಿದ್ದರೂ, ಇಂತಹದ್ದೊಂದು ಘಟನೆ ನಡೆಯುವಾಗ ಮಹಿಳೆ ಧೈರ್ಯದಿಂದಿದ್ದು, ರೈಲು ಸಂಪೂರ್ಣವಾಗಿ ಹೋಗುವವರೆಗೂ ರೈಲಿನ ಹಳಿಹಳ ಮಧ್ಯೆಯಿಂದ ಎದ್ದಿಲ್ಲ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇತ್ತೀಚಿನ ಸುದ್ದಿ

Exit mobile version