ಅನ್ಯಕೋಮಿನ ಮಹಿಳೆಯೊಂದಿಗೆ ಲಾಡ್ಜ್‌ ಗೆ ಬಂದಿದ್ದ ಯುವಕನಿಗೆ 12 ಜನರಿಂದ ಹಲ್ಲೆ!

police
11/01/2024

ಹಾವೇರಿ: ಅನ್ಯಕೋಮಿನ ಮಹಿಳೆಯೊಂದಿಗೆ ಲಾಡ್ಜ್‌ ಗೆ ಬಂದಿದ್ದ ಯುವಕನಿಗೆ  12 ಮಂದಿಯ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜ.7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಾವೇರಿ ಜಿಲ್ಲೆಯ ಹಂಗಲ್‌ ನಲ್ಲಿ ಜನವರಿ 7ರಂದು ಈ ಘಟನೆ ನಡೆದಿದ್ದು,  ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್​ ಗೆ ಶಿರಸಿ ಮೂಲದವರೆನ್ನಲಾದ ಅನ್ಯ ಕೋಮಿನ ಯುವತಿಯೊಂದಿಗೆ ಯುವಕನೋರ್ವ ಆಗಮಿಸಿರುವ ಮಾಹಿತಿ ಪಡೆದ ಯುವಕರ ಗುಂಪು ಈ ಕೃತ್ಯ ಎಸಗಿದೆ ಎನ್ನಲಾಗಿದೆ.

ಯುವಕನಿಗೆ ಹಲ್ಲೆ ನಡೆಸಿದ ಬಳಿಕ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಯುವಕರ ತಂಡ ಕಿರುಕುಳ ನೀಡಿ ಹಲ್ಲೆ ನಡೆಸಿರುವುದಾಗಿ ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.

ಘಟನೆ ಸಂಬಂಧ ಯುವತಿಯ ಕುಟುಂಬಸ್ಥಲು ಹಾನಗಲ್ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜ್ಯದಲ್ಲಿ ಅನೈತಿಕ ಪೊಲೀಸ್‌ ಗಿರಿ ವಿರುದ್ಧ ಕಠಿಣ ಕ್ರಮದ ಭರವಸೆ ಸರ್ಕಾರ ನೀಡಿದ್ದರೂ, ಮತ್ತೆ ಮತ್ತೆ ಇಂತಹ ಪ್ರಕರಣಗಳ ಪತ್ತೆಯಾಗುತ್ತಲೇ ಇದೆ.

 

ಇತ್ತೀಚಿನ ಸುದ್ದಿ

Exit mobile version