ವಿವಾಹಿತೆಯೊಂದಿಗೆ ಓಡಿ ಹೋದ ಯುವಕನಿಗೆ ಥಳಿಸಿ, ಮೂತ್ರಕುಡಿಸಿ, ಚಪ್ಪಲಿ ಹಾರ ಹಾಕಿ ವಿಕೃತಿ

ಮಧ್ಯಪ್ರದೇಶ: ವಿವಾಹಿತೆಯೊಂದಿಗೆ ಓಡಿ ಹೋದ ಯುವಕನೋರ್ವನನ್ನು ಥಳಿಸಿ, ಬಲವಂತವಾಗಿ ಮೂತ್ರಕುಡಿಸಿ, ಚಪ್ಪಲಿ ಹಾರ ಹಾಕಿದ ಅಮಾನವೀಯ ಕೃತ್ಯ ಉಜ್ಜಯಿನಿಯಲ್ಲಿ ಬೆಳಕಿಗೆ ಬಂದಿದೆ.
ಬದ್ ನಗರ ತಹಸಿಲ್ ನ ಭಾಟ್ ಪಚ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಗಮ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿ ಘಟ್ಟಿಯ ಪ್ರದೇಶದವನಾಗಿದ್ದು, ಮಹಿಳೆಯೊಂದಿಗೆ ಓಡಿ ಹೋಗಿದ್ದಕ್ಕೆ ಅರ್ಧ ತಲೆಕೂದಲು ಮತ್ತು ಮೀಸೆ ಬೋಳಿಸಿ ಚಿತ್ರಹಿಂಸೆ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಯುವಕ ಇನ್ನೂ ಯಾವುದೇ ಠಾಣೆಯಲ್ಲಿ ದೂರು ನೀಡಿಲ್ಲ, ಮೂರು ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವಕನನ್ನು ಪೊಲೀಸರು ಸಂಪರ್ಕಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿತೇರ್ಶ್ ಭಾರ್ಗವ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth