ಮಹಿಳೆಯಿಂದ ಆಕ್ಸಿಡೆಂಟ್ ನಾಟಕ: ವಾಹನ ಚಾಲಕರೇ ಇನ್ನಾದರೂ ಎಚ್ಚರವಾಗಿರಿ!

bangalore
30/08/2024

ಬೆಂಗಳೂರು: ಹಣಕ್ಕಾಗಿ ಅಪಘಾತದ ನಾಟಕವಾಡುವ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ಬಿದ್ದಿದ್ದು, ಬಳಿಕ ವಿಚಿತ್ರವಾಗಿ ಮಹಿಳೆ ಏನನ್ನೋ ಹೇಳುತ್ತಿರುವುದು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಾರಿನಲ್ಲಿದ್ದ ಕ್ಯಾಮರಾದಲ್ಲಿ ಮಹಿಳೆಯ ವರ್ತನೆ ಸೆರೆಯಾಗಿದೆ. ಕಾರಿಗೆ ಏಕಾಏಕಿ ಮಹಿಳೆ ಅಡ್ಡ ಬಂದಿದ್ದಾಳೆ. ಈ ವೇಳೆ ಕಾರು ಚಾಲಕ ತಕ್ಷಣ ವೇಗತಗ್ಗಿಸಿ ಕಾರು ನಿಲ್ಲಿಸಿದ್ದಾನೆ. ಮಹಿಳೆ ತಾನೇ ಬಂದು ಕಾರಿನ ಬಾನೆಟ್ ಮೇಲೆ ಬೀಳುತ್ತಾಳೆ, ಗಾಯಗೊಂಡವಳಂತೆ ನಟಿಸುತ್ತಾಳೆ.  ಬಳಿಕ ಕಾರಿನ ಬಾನೆಟ್ ಗೆ ಕೈಯಿಂದ ಹೊಡೆಯುತ್ತಾಳೆ, ಈ ವೇಳೆ ಕಾರು ಚಾಲಕ ಪೊಲೀಸ್ ಪೊಲೀಸ್ ಎಂದು ಕೂಗಿ ಮಹಿಳೆಯನ್ನು ಬೆದರಿಸಲು ಮುಂದಾಗ್ತಾನೆ. ಆದರೆ ಆ ಮಹಿಳೆ ಕ್ಯಾರೇ ಅನ್ನದೇ ಕಾರಿನ ಮುಂದಿನಿಂದ ಕದಲದೇ ನಿಂತಿರುತ್ತಾಳೆ. ಪ್ಲಾನ್ ವರ್ಕೌಟ್ ಆಗಿಲ್ಲ ಅನ್ನೋದು ತಿಳಿಯುತ್ತಿದ್ದಂತೆಯೇ ಸ್ಥಳದಿಂದ  ತೆರಳುತ್ತಾಳೆ.

ಶೋನೀ ಕಪೂರ್ ಎಂಬವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಕಾರಿನಲ್ಲಿ ಡ್ಯಾಶ್ ಕ್ಯಾಮ್ ಇದ್ದ ಕಾರಣ ಇವರು ಸೇಫ್ ಆಗಿದ್ದಾರೆ. ಎಲ್ಲೇ ಆದರೂ ಆಕ್ಸಿಡೆಂಟ್ ಆದ್ರೆ ಜನರು ಗಾಯಾಳುಪರವಾಗಿಯೇ ನಿಲ್ಲುತ್ತಾರೆ. ಈ ವಿಚಾರ ತಿಳಿದೇ ವಂಚಕರು ಅಪಘಾತದ ನಾಟಕವಾಡಿ ಸಿಕ್ಕಿದಷ್ಟು ದೋಚುತ್ತಾರೆ. ಹೀಗಾಗಿ ಡ್ಯಾಶ್ ಕ್ಯಾಮ್ ಅಳವಡಿಸಿಕೊಳ್ಳಿ ಅಂತ ಈ ವಿಡಿಯೋ ನೋಡಿದವರು ಕಾಮೆಂಟ್ ಹಾಕ್ತಾ ಇದ್ದಾರೆ.

ಭಾರತದಲ್ಲಿ ವಾಹನ ಓಡಿಸುವುದೇ ಆದರೆ ಡ್ಯಾಶ್ ಕ್ಯಾಮ್ ಬೇಕೇ ಬೇಕು, ಯಾವ ರಸ್ತೆಯಲ್ಲಿ ಎಂಥೆಂತಹ ಮೂರ್ಖರು ಸಿಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ರೀತಿಯಾಗಿ ನಾವು ಹಣ ಕಳೆದುಕೊಂಡಿದ್ದೆವು ಅಂತ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version