5:31 AM Wednesday 22 - October 2025

ಮಾದಕ ವಸ್ತು ಮಾರಾಟ: 60 ಲಕ್ಷ ಮೌಲ್ಯದ ಮಾದಕ ವಸ್ತುಗಳ ಸಹಿತ ಆರೋಪಿಗಳ ಬಂಧನ

vv puram
06/07/2023

ಬೆಂಗಳೂರು: ಬೆಂಗಳೂರು ನಗರದ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 60 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ‌ ಪಡೆದಿದ್ದಾರೆ.

ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರು ರಾಜಸ್ಥಾನದಿಂದ ಕೊಲಿಯ‌ ಮುಖಾಂತರ ಮಾದಕ ವಸ್ತುವಾದ ಓಪಿಎಂ ಪಪ್ಪಿಯನ್ನು ಕಡಿಮೆ ಬೆಲೆಗೆ ಹರಿಸಿಕೊಂಡು ಅದನ್ನು ಮನೆಯಲ್ಲಿ ಮಿಕ್ಸ್‌ ಗ್ರೈಂಡರ್ ಮೂಲಕ ಪುಡಿಮಾಡಿ ರಾತ್ರಿ ಪೂರಾ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರನ್ನು ಪಾರ್ಟಿ ಮತ್ತು ಇತರೆ ಮೋಜು-ಮಸ್ತಿಯ ಕೂಟಗಳಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳು, ಸಾವೇರ್ ಇ೦ಜಿನಿಯರುಗಳಿಗೆ ನೀಡುವ ಕೆಲಸ ಈ ಆರೋಪಿಗಳದ್ದಾಗಿತ್ತು.

ಅಲ್ಲದೇ ‌ಪೊಲೀಸರು  ಪುಡಿಯನ್ನು  ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನು ಮಾರಾಟ ಮಾಡಲು ವಶದಲ್ಲಿ ಇಟ್ಟುಕೊಂಡಿದ್ದ 55 ಕೆ.ಜಿ ಮಾದಕ ವಸ್ತುವನ್ನು ಮತ್ತು ಸಾಗಾಣಿಕೆಗೆ ಬಳಸುತ್ತಿದ್ದ ಒಂದು ಅಪೆ ಲಗೇಜ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


LIVE | ವಿಡಿಯೋ ನೋಡಿ:

ಇತ್ತೀಚಿನ ಸುದ್ದಿ

Exit mobile version