ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪ: ಇಬ್ಬರು ಆರೋಪಿಗಳು ಅರೆಸ್ಟ್

19/08/2023
ಮಂಗಳೂರು ನಗರದ ಉರ್ವಸ್ಟೋರ್ ಮೈದಾನದ ಬಳಿಯ ದಿನಸಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಗೋಕುಲದಾಸ ಶೆಣೈ ಮತ್ತು ದೀಪಕ್ ಶೆಟ್ಟಿ ಬಂಧಿತರು. ಮಟ್ಕಾ ದಂಧೆಗೆ ಬಳಸಿದ್ದ 4,24,490 ರೂ. ನಗದು, ಮೊಬೈಲ್ ಫೋನ್ ಹಾಗೂ ಮಟ್ಕಾ ಬರೆದಿದ್ದ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಉರ್ವ ಠಾಣೆಯ ಇನ್ ಸ್ಪೆಕ್ಟರ್ ಗಳಾದ ಭಾರತಿ, ಹರೀಶ್ ಎಚ್.ಎ. ಎಸ್ಸೈಗಳಾದ ಸಫೀನಾ, ವೆಂಕಟೇಶ್, ರಾಮಚಂದ್ರ, ಸುನೀತಾ, ಭರಣಿ ದೀಕ್ಷಿತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.