1:22 PM Wednesday 29 - October 2025

ಆಟಿಕೆ ಪಿಸ್ತೂಲ್ ತೋರಿಸಿ ಕಾರು, ಮೊಬೈಲ್ ದೋಚಿದ್ದ ಆರೋಪಿ ಅರೆಸ್ಟ್

nowfall
26/08/2023

ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಕಾರು ಮತ್ತು ಮೊಬೈಲ್ ದೋಚಿದ್ದ ಪ್ರಕರಣದ ಆರೋಪಿ  ನೌಫಾಲ್ ಯಾನೆ ಟೊಪ್ಪಿ ನೌಫಾಲ್ (31) ಎಂಬಾತನನ್ನು ಮಂಗಳೂರು ನಗರದ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಜೀದ್ ಸೈಯದ್ ಎಂಬವರನ್ನು ನೌಫಾಲ್ ಮತ್ತು ಪುಚ್ಚ ಎಂಬವರು ಕಿಡ್ನಾಪ್ ಮಾಡಿ 5 ಲಕ್ಷ ರೂ. ಹಾಗೂ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಕೊಡಲು ನಿರಾಕರಿಸಿದಾಗ ಅವರ ಬಳಿಯಿಂದ ಕಾರು, ಮೊಬೈಲ್ ಹಾಗೂ 18 ಸಾವಿರ ರೂ, ಸುಲಿಗೆ ಮಾಡಿ ಪರಾರಿಯಾಗಿದ್ದರು ಎಂದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.‌

ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್‌ ನನ್ನು ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಎ.ಸಿ.ಲೋಕೇಶ್ ಅವರು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

Exit mobile version