ಹಿಂಸಾಚಾರಕ್ಕೆ ಪ್ರಚೋದಿಸಿದ ಅಗ್ನಿ ಶ್ರೀಧರ್: ನಟ ಚೇತನ್ ಅಹಿಂಸಾ ಖಂಡನೆ

ಬೆಂಗಳೂರು: ‘ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ಬಜರಂಗದಳದ ಹುಡುಗರನ್ನು ಬದಲಿಸಿ– ಇಲ್ಲಾ ಬಾರಿಸಿ’ ಎಂಬ ಅಗ್ನಿ ಶ್ರೀಧರ್ ಅವರ ಹೇಳಿಕೆಯನ್ನು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಚೇತನ್, ‘ಅಗ್ನಿ’ ಶ್ರೀಧರ್ ಹೇಳುತ್ತಾರೆ: ‘ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ಬಜರಂಗದಳದ ಹುಡುಗರನ್ನು ಬದಲಿಸಿ– ಇಲ್ಲಾ ಬಾರಿಸಿ’ ಶ್ರೀಧರ್ ಅವರು ನನಗೆ ನೀಡಿದ ಚಲನಚಿತ್ರ ಅವಕಾಶಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ; ಆದರೇ, ಹಿಂಸಾಚಾರಕ್ಕೆ ಅವರ ಈ ಪ್ರಚೋದನೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ.
(ಮಾಜಿ) ಭೂಗತ ಲೋಕದ ಡಾನ್ ನಿಂದ ನಾವು ಎಂದಾದರೂ ಸಾಮಾಜಿಕ ಸದಾಚಾರ ಅಥವಾ ಅಹಿಂಸೆಯನ್ನು ನಿರೀಕ್ಷಿಸಬಹುದೇ? ಎಂದೂ ಅವರು ಪ್ರಶ್ನಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw