ಫ್ರಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಫೆಲೆಸ್ತೀನ್‌ಗೆ ಬೆಂಬಲ ಸಾರಿದ ಖ್ಯಾತ ನಟಿ ಕುಸ್ರುಥಿ

24/05/2024

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕಾನ್ ಚಲನಚಿತ್ರೋತ್ಸವದ ವೇದಿಕೆಯಲ್ಲಿ ನಟಿ ಕಣಿ ಕುಸ್ರುಥಿ ಫೆಲೆಸ್ತೀನ್ ಗೆ ಬೆಂಬಲ ಸಾರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಲ್ಲಂಗಡಿ ಹಣ್ಣಿನ ರೂಪದಲ್ಲಿರುವ ವ್ಯಾನಿಟಿ ಬ್ಯಾಗ್ ಅನ್ನು ಅವರು ಎತ್ತಿ ಹಿಡಿಯುತ್ತಾ ರೆಡ್ ಕಾರ್ಪೆಟ್ ಗೆ ಬಂದಿದ್ದಾರೆ.

ಫೆಲೆಸ್ತೀನಿಗೆ ಬೆಂಬಲ ಸಾರುವ ರೂಪಕವಾಗಿ ಕಲ್ಲಂಗಡಿ ಹಣ್ಣಿನ ರೂಪವನ್ನು ಪ್ರದರ್ಶಿಸಲಾಗುತ್ತಿದೆ.
ಪಾಯಲ್ ಕಪಾಡಿಯ ನಿರ್ದೇಶಿಸಿರುವ ಆಲ್ ವಿ ಇಮೇಜಿಂಗ್ ಅಸ್ ಲೈಟ್ ಎಂಬ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿ ಇನ್ನೋರ್ವ ಮಲೆಯಾಳಂ ಭಾಷೆಯ ನಟಿಯಾಗಿರುವ ದಿವ್ಯ ಪ್ರಭ ಜೊತೆ ಕಾನ್ ಚಲನಚಿತ್ರೋತ್ಸವದ ವೇದಿಕೆಗೆ ಬಂದರು. ಸಿನಿಮಾ ಪ್ರದರ್ಶನದ ಬಳಿಕ ಈ ಸಿನಿಮಾದಲ್ಲಿದ್ದ ತಾರೆಯರು ರೆಡ್ ಕಾರ್ಪೆಟ್ ನಲ್ಲಿ ನಿಂತರು. ಬಿಳಿ ಬಣ್ಣದ ಗೌನ್ ಧರಿಸಿ ಬಂದಿದ್ದ ಕಣಿ ಕುಸ್ರುತಿ ಯ ಕೈಯಲ್ಲಿ ಕಲ್ಲಂಗಡಿ ರೂಪದ ಬ್ಯಾಗ್ ಕಾಣಿಸಿತು. 30 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ಸಿನಿಮಾ ಒಂದು ಕಾನ್ ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿದೆ.

ಫೆಲೆಸ್ತೀನಿ ಧ್ವಜವು ಕೆಂಪು ಬಿಳಿ ಮತ್ತು ಹಸಿರು ಬಣ್ಣವನ್ನು ಹೊಂದಿದ್ದು ಅಂತಹ ಬಣ್ಣದ ವಿವಿಧ ಆಕೃತಿಗಳನ್ನು ಪ್ರದರ್ಶಿಸುವ ಮೂಲಕ ಜಗತ್ತಿನ ಬೇರೆ ಬೇರೆ ಕಡೆಯ ಬೇರೆ ಬೇರೆ ಮಂದಿ ಫೆಲೆಸ್ತೀನಿ ಗೆ ತಮ್ಮ ಬೆಂಬಲವನ್ನು ಸಾರುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version