3:01 PM Wednesday 27 - August 2025

ಎಲೆಕ್ಷನ್‌‌ ಮಧ್ಯೆ ಸುಳ್ಳು ಮಾಹಿತಿಗಳ ಹರಿದಾಟ: ಡೀಪ್‌ಫೇಕ್ ತಂತ್ರಜ್ಞಾನದ ಬಲಿಪಶುವಾದ ಅಮಿರ್ ಖಾನ್, ರಣವೀರ್ ಸಿಂಗ್

20/04/2024

ಲೋಕಸಭಾ ಚುನಾವಣೆಗಳಿಗೆ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ಕಳೆದ ಕೆಲವು ವಾರಗಳಿಂದ ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿಗಳ ಮತ್ತು ಡೀಪ್ ಫೇಕ್ ವೀಡಿಯೊಗಳ ಮಹಾಪೂರವೇ ಹರಿಯುತ್ತಿದೆ. ನಟ ಆಮಿರ್ ಖಾನ್ ಮತ್ತು ನಟ ರಣವೀರ್ ಸಿಂಗ್ ಡೀಪ್‌ಫೇಕ್ ತಂತ್ರಜ್ಞಾನದ ಬಲಿಪಶುವಾಗಿದ್ದಾರೆ.

ಈ ವಾರ ಬಾಲಿವುಡ್ ನಟ ಅಮಿರ್ ಖಾನ್ ರ ಎರಡು ವೀಡಿಯೊಗಳು ವೈರಲ್ ಆಗಿದ್ದವು. ಇವೆರಡನ್ನೂ ಅವರ ಜನಪ್ರಿಯ ಟಿವಿಯ ಕಾರ್ಯಕ್ರಮ ‘ಸತ್ಯಮೇವ ಜಯತೆ’ಯ ಪ್ರಚಾರದ ವೀಡಿಯೊಗಳನ್ನು ತಿರುಚಿ ಸಿದ್ಧಗೊಳಿಸಲಾಗಿತ್ತು. ಒಂದರಲ್ಲಿ ಅಮಿರ್ ಖಾನ್ ಕಾಂಗ್ರೆಸ್ ನ್ನು ಸ್ಪಷ್ಟವಾಗಿ ಬೆಂಬಲಿಸುತ್ತಿದ್ದಂತೆ ಕಂಡು ಬಂದಿದ್ರೆ ಇನ್ನೊಂದರಲ್ಲಿ ಅವರು ’ನ್ಯಾಯ’ದ ಬಗ್ಗೆ ಮಾತನಾಡಿದ್ದರು. ‘ನ್ಯಾಯ’ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪ್ರಮುಖವಾಗಿ ಪ್ರಸ್ತಾವಿಸುತ್ತಿರುವ ಅಂಶವಾಗಿದ್ದು, ಅದರ ಚುನಾವಣಾ ಪ್ರಣಾಳಿಕೆಯು ‘ನ್ಯಾಯ ಪತ್ರ ’ಶೀರ್ಷಿಕೆಯನ್ನು ಹೊಂದಿದೆ.

ಇತ್ತೀಚಿಗೆ ನಟ ರಣವೀರ್ ಸಿಂಗ್ ಡೀಪ್‌ಫೇಕ್ ತಂತ್ರಜ್ಞಾನದ ಬಲಿಪಶುವಾಗಿದ್ದರು. ನಿರುದ್ಯೋಗ ಮತ್ತು ಹಣದುಬ್ಬರ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವಂತೆ ತೋರಿಸುವ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. ಮೂಲ ವೀಡಿಯೊದಲ್ಲಿ ವಾಸ್ತವದಲ್ಲಿ ಸಿಂಗ್ ಮೋದಿಯವರನ್ನು ಹೊಗಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version