5:39 AM Wednesday 20 - August 2025

ಪ್ರಯಾಣಿಕರ ಮಾಹಿತಿಯನ್ನು ವಿಮಾನ ಸಂಸ್ಥೆಗಳು ಭಾರತೀಯ ಕಸ್ಟಮ್ಸ್ ಗೆ ವರ್ಗಾಯಿಸಬೇಕು ಎಂಬ ನಿಯಮ: ಆತಂಕ ಸೃಷ್ಟಿ

09/01/2025

ಪ್ರಯಾಣಿಕರ ಮಾಹಿತಿಯನ್ನು ವಿಮಾನ ಸಂಸ್ಥೆಗಳು ಭಾರತೀಯ ಕಸ್ಟಮ್ಸ್ ಗೆ ವರ್ಗಾಯಿಸಬೇಕು ಎಂಬ ನಿರ್ದೇಶನವು ಅನಿವಾಸಿ ಭಾರತೀಯರನ್ನು ಆತಂಕಕ್ಕೆ ತಳ್ಳಿದೆ. ಈ ಕುರಿತಂತೆ ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಜಯಶಂಕರ್ ಅವರಿಗೆ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಪ್ರಯಾಣಿಕರು ಯಾತ್ರೆ ಹೊರಡುವುದಕ್ಕಿಂತ ಮೊದಲೇ ಮಾಹಿತಿಯನ್ನು ಕಷ್ಟಮ್ಸ್ ಗೆ ವರ್ಗಾಯಿಸ ಬೇಕೆಂಬ ಕೇಂದ್ರ ಸರಕಾರದ ಹೊಸ ನಿಯಮವು ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ.

ಇದೇ ವೇಳೆ ಅಸೋಸಿಯೇಷನ್ ಯಾವ ಮನವಿಯನ್ನು ಸಲ್ಲಿಸಿದೆಯೋ ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಜೈ ಶಂಕರ್ ಹೇಳಿದ್ದಾರೆ.

ಪ್ರಯಾಣಿಕರ ಮಾಹಿತಿಯನ್ನು ಕಸ್ಟಮ್ಸ್ ಗೆ ವರ್ಗಾಯಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಮಾತ್ರ ಅಲ್ಲ ಈ ನಿರ್ದೇಶನವನ್ನು ಪಾಲಿಸದ ಕಂಪನಿಗಳಿಗೆ ದಂಡ ವಿಧಿಸುವುದಾಗಿಯೂ ಹೇಳಲಾಗಿದೆ.

ವಿಮಾನ ಹೊರಡುವುದಕ್ಕಿಂತ 24 ಗಂಟೆಯ ಮೊದಲು ಪ್ರಯಾಣಿಕರ ಮಾಹಿತಿಯನ್ನು ಕಷ್ಟಮ್ಸ್ ಅಧಿಕಾರಿಗಳಿಗೆ ವರ್ಗಾಯಿಸಬೇಕಾಗಿದೆ. ಟ್ರಾನ್ಸಿಟ್ ಪ್ರಯಾಣಿಕರ ಮಾಹಿತಿಯೂ ಸಹಿತ ಎಲ್ಲರ ಮಾಹಿತಿಯನ್ನೂ ವಿಮಾನಯಾನ ಸಂಸ್ಥೆಗಳು ಕಸ್ಟಮ್ಸ್ ಅಧಿಕಾರಿಗಳಿಗೆ ವರ್ಗಾಯಿಸಬೇಕಾಗಿದೆ. ಪ್ರಯಾಣಿಕರ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣಕ್ಕಾಗಿ ಉಪಯೋಗಿಸುವ ಪೇಮೆಂಟ್ ವಿಧಾನ, ಪಿಎನ್ ಆರ್ ನಂಬರ್, ಟಿಕೆಟ್ ಇಶ್ಯೂ ಮಾಡಿದ ದಿನಾಂಕ, ಬ್ಯಾಗೇಜ್ ಮುಂತಾದ ವಿವರಗಳನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ವರ್ಗಾಯಿಸಬೇಕಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version