3:11 AM Saturday 13 - December 2025

ಅಜ್ಜನ ಮಾತು ಕೇಳಿ ತಂದೆಯನ್ನೇ ಕೊಂದ ಮೊಮ್ಮಗ! | ಮನೆ ಹಾಳು ಮಾಡಿದ ಮದ್ಯ

17/02/2021

ಚಿಕ್ಕಬಳ್ಳಾಪುರ: ಡ್ರಗ್ಸ್ ದೊಡ್ಡವರ ಮನೆ ಹಾಳು ಮಾಡಿದರೆ, ಮದ್ಯ ಬಡವರ ಮನೆ ಹಾಳು ಮಾಡುತ್ತಿದೆ. ಕುಡಿತದ ನಶೆಯಲ್ಲಿ ತಾತ ತನ್ನ ಮೊಮ್ಮಗನ ಬಳಿಯಲ್ಲಿ ತಂದೆಯನ್ನು ಕೊಲ್ಲು ಎಂದು ಹೇಳಿದ್ದಾನೆ. ತಾತನ ಮಾತಿನಂತೆ ತಂದೆಯನ್ನೇ ಮಗ ಕೊಂದು ಹಾಕಿದ ಘಟನೆ  ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಚನ್ನಭೈರೇನಹಳ್ಳಿಯಲ್ಲಿ ನಡೆದಿದೆ.

50 ವರ್ಷದ ಮುನೇಗೌಡ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ.  ಮಗ ಮಂಜುನಾಥ್ ಹತ್ಯೆ ಆರೋಪಿಯಾಗಿದ್ದಾನೆ. ಅಜ್ಜ, ಮಗ, ಮೊಮ್ಮಗ ಈ ಮೂವರಿಗೂ ಕುಡಿತದ ಚಟವಿತ್ತು. ಪ್ರತೀ ದಿನ ಅಜ್ಜ ಹಾಗೂ ತಂದೆಯ ನಡುವೆ ಜಗಳವಾಗುತ್ತಿತ್ತು.  ನಿನ್ನೆ ರಾತ್ರಿಯೂ ಜೋರಾಗಿ ಗಲಾಟೆ ನಡೆದಿದೆ.

ಗಲಾಟೆ ವೇಳೆ ಅಜ್ಜ ರಂಗಪ್ಪ, ಮೊಮ್ಮಗ ಮಂಜುನಾಥನ ಬಳಿಯಲ್ಲಿ,  ಯಾವಾಗಲೂ ಜಗಳ, ಮಾತಿಗೆ ಮಾತು ಬೆಳೆಸ್ತಿದ್ದಾನೆ ಅವನನ್ನು ಕೊಂದು ಬಿಡು ಎಂದು ಪ್ರೇರೇಪಿಸಿದ್ದಾನೆ. ಅಜ್ಜನ ಮಾತನ್ನು ಹಾಗೆಯೇ ಪಾಲಿಸಿದ ಮೊಮ್ಮಗ ಮಂಜುನಾಥ್ ತರಕಾರಿ ಕತ್ತರಿಸುವ ಚೂರಿಯಿಂದ ತನ್ನ ತಂದೆಗೆ ಇರಿದು ಕೊಂದಿದ್ದಾನೆ.

ಘಟನೆ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗ ಮಂಜುನಾಥ್ ಹಾಗೂ ತಾತ ರಂಗಪ್ಪನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version