ಅಕ್ರಮ ಗೋಸಾಗಾಟ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂಪರ ಸಂಘಟನೆಗಳು

13/01/2021

ಉಳ್ಳಾಲ: ಅಕ್ರಮ ಗೋಸಾಗಾಟವನ್ನು ತಡೆ ಹಿಡಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು, ಕೋಟೆಕಾರ್ ನಿಂದ ಬಾಕ್ರಬೈಕ್ ಕಡೆಗೆ ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿತ್ತು.

6 ಹಸುಗಳು ಹಾಗೂ ಒಂದು ಕರುವನ್ನು ಕೋಟೆಕಾರು ಡೈರಿಯಿಂದ ಬಾಕ್ರಬೈಲು ಡೈರಿಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.  ಗೋವು ಸಾಗಾಟ ಮಾಡುತ್ತಿರುವವರು, ನಾವು ಗೋವುಗಳನ್ನು ಸಾಕುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ಗೋಸಾಗಾಟಕ್ಕೆ ಸೂಕ್ತ ದಾಖಲೆಗಳು ಇರದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version