ಅಯ್ಯಯ್ಯೋ: ಹೆರ್ಸೆಯ ಚಾಕಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ..!

ಮುಂಬೈಯ ಡಾಕ್ಟರ್ ಕೋನ್ ಐಸ್ ಕ್ರೀಮ್‌ಅನ್ನು ತಿನ್ನುತ್ತಿರುವಾಗ ಮಾನವ ಬೆರಳಿನ ತುಂಡು ಸಿಕ್ಕಿರುವ ಸುದ್ದಿ ಈಗಾಗಲೇ ನಿಮಗೆ ಗೊತ್ತಿರಬಹುದು. ಇದರ ಬೆನ್ನಿಗೆ ಇದೀಗ ದಂಗುಬಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದೆ. ಜಾಗತಿಕವಾಗಿಯೇ ಪ್ರಸಿದ್ಧವಾಗಿರುವ ಚಾಕಲೇಟ್ ಕಂಪನಿಯಾದ ಹೆರ್ಸೆಯ ಚಾಕಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಸಿಕ್ಕಿರುವುದು ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ.
ಪ್ರಮಿ ಶ್ರೀಧರ್ ಎಂಬ ಯುವತಿ ಅದರ ಚಿತ್ರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೋ ಮೂಲಕ ಆರ್ಡರ್ ಮಾಡಿದ ಸಿರಪ್ಪಿನಲ್ಲಿ ಇಲಿ ಪತ್ತೆಯಾಗಿದೆ ಎಂದು ಯುವತಿ ಹೇಳಿದ್ದಾರೆ. ತನ್ನ ಕುಟುಂಬದ ಮೂವರು ಈ ಸಿರಪ್ಪನ್ನು ಬಳಸಿದ್ದಾರೆ ಮತ್ತು ಒಬ್ಬರು ವೈದ್ಯರ ಸಲಹೆ ಪಡೆದಿದ್ದಾರೆ ಎಂದು ಯುವತಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth