ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ಮಾಡಿದ ಆರೋಪಿಯ ಮನೆ ಧ್ವಂಸ ಮಾಡಿದ್ದು ಸರಿಯಲ್ಲ: ಅಖಿಲ ಭಾರತೀಯ ಬ್ರಾಹ್ಮಣ ಸಮಾಜ ವಿರೋಧ

brahmin samaj
08/07/2023

ಭೋಪಾಲ್: ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ಮಾಡಿ ವಿಕೃತಿ ಮೆರೆದಿದ್ದ ಅನಾಗರಿಕ ಪ್ರವೇಶ್ ಶುಕ್ಲಾನ ಮನೆ ಧ್ವಂಸ ಮಾಡಿರುವ ಸರ್ಕಾರದ ಕಾರ್ಯಕ್ಕೆ ಇಡೀ ದೇಶದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸರ್ಕಾರದ ಕ್ರಮವನ್ನು ಅಖಿಲ ಭಾರತೀಯ ಬ್ರಾಹ್ಮಣ ಸಮಾಜ ಎಂಬ ಸಂಘಟನೆಯ ಮಧ್ಯಪ್ರದೇಶ ಘಟಕ ವಿರೋಧಿಸಿದೆ.

ಶುಕ್ಲಾ ಮಾಡಿರುವ ಕೃತ್ಯ ಅಕ್ಷಮ್ಯ ಎನ್ನುತ್ತಲೇ, ಆತನ ಮನೆಯನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿರುವ ಬ್ರಾಹ್ಮಣ ಸಮಾಜ, ಈ ಮನೆಯು ಶುಕ್ಲಾನ ತಂದೆಗೆ ಸೇರಿದ ಮನೆಯಾಗಿದೆ. ಮಗನ ಕೃತ್ಯಕ್ಕೆ ಆತನ ಕುಟುಂಬದ ಸದಸ್ಯರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದೆ.

ಮನೆ ಧ್ವಂಸ ವಿಚಾರವಾಗಿ ಹೈಕೋರ್ಟ್ ಮೊರೆ ಹೋಗುವುದಾಗಿ ಸರ್ಕಾರಕ್ಕೆ ಬ್ರಾಹ್ಮಣ ಸಮಾಜ ಎಚ್ಚರಿಸಿದ್ದು, ಶುಕ್ಲಾನ ಕುಟುಂಬಕ್ಕೆ ಸಹಾಯ ನೀಡುವ ಭರವಸೆ ನೀಡಿದೆ.

ಸಂಘಟನೆಯ ರಾಜ್ಯ ಮುಖ್ಯಸ್ಥ ಪಂಡಿತ್ ಪುಷ್ಪೇಂದ್ರ ಮಿಶ್ರಾ ಎಂಬವರು ಈ ಬಗ್ಗೆ ಮಾತನಾಡಿ, ಪ್ರವೇಶ್ ಶುಕ್ಲಾ ಅವರಂತಹ ವ್ಯಕ್ತಿ ಯಾವುದೇ ಜಾತಿ ಮತ್ತು ಸಮಾಜದಲ್ಲಿ ಸ್ವೀಕಾರಾರ್ಹವಲ್ಲ, ಅವರಂತಹ ಕೃತ್ಯ ಅತ್ಯಂತ ಶೋಚನೀಯವಾಗಿದೆ. ಆದರೆ, ಬೇರೆಯವರ ಕೃತ್ಯಕ್ಕೆ ಇತರರನ್ನು ಶಿಕ್ಷಿಸುವುದು ಕಾನೂನು ಬದ್ಧವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಆರೋಪಿಯ ಕುಟುಂಬಕ್ಕೆ ಸಂಪೂರ್ಣ ನೆರವು ನೀಡುವುದಾಗಿ ನಾನು ಭರವಸೆ ನೀಡುತ್ತೇನೆ ಮತ್ತು ಶುಕ್ಲಾ ಕುಟುಂಬಕ್ಕೆ ಸಹಾಯ ಮಾಡುವಂತೆ ಸಮಾಜದ ಎಲ್ಲ ಜಿಲ್ಲಾಧ್ಯಕ್ಷರನ್ನು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version