11:11 PM Wednesday 21 - January 2026

ಅನಾಥಾಶ್ರಮದಲ್ಲಿದ್ದ ತನ್ನ ಬಾಲಕ ಅಭಿಮಾನಿಯ ಆಸೆ ನೆರವೇರಿಸಿದ ನಟ ಅಲ್ಲು ಅರ್ಜುನ್

25/12/2020

ಜನಪ್ರಿಯ ಟಾಲಿವುಡ್ ನಟ ಅಲ್ಲೂ ಅರ್ಜುನ್ ಅವರು ಈ ಬಾರಿಯ ಕ್ರಿಸ್ ಮಸ್ ಸಂದರ್ಭದಲ್ಲಿ ವಿಶೇಷ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ನಟಿ ವಿತಿಕಾ ಶೆರು ಅವರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ  ಅವರು, ತಾನು ಕ್ರಿಸ್ಮಸ್ ಪ್ರಯುಕ್ತ ಅನಾಥಾಶ್ರಮದಲ್ಲಿ ವಿಡಿಯೋವೊಂದನ್ನು ಮಾಡಲಿದ್ದೇನೆ.  ಈ ಆಶ್ರಮದ ಮಕ್ಕಳಲ್ಲಿ ನಾನು ನಿಮ್ಮ ಯಾವ ಆಸೆ ಈಡೇರಿಸಬೇಕು ಎಂದು ಕೇಳಿದ್ದೆ. ಅದರಲ್ಲಿ ಒಬ್ಬ ಹುಡುಗ ಹೇಳಿದ ಆಸೆಯನ್ನು ನೀವು ಮಾತ್ರವೇ ಈಡೇರಿಸಲು ಸಾಧ್ಯ ಎಂದು ಹೇಳಿದ್ದರು.

ಎಲ್ಲ ಮಕ್ಕಳು ತಮಗೆ ಬೇಕಾದ ವಸ್ತುಗಳನ್ನು ಕೇಳಿದರೆ, ಒಬ್ಬ ಹುಡುಗ ಮಾತ್ರ ನನಗೆ ಅಲ್ಲು ಅರ್ಜುನ್ ಅವರ ಆಟೋಗ್ರಾಫ್ ಬೇಕು ಎಂದು ಕೇಳಿದ್ದಾನೆ. ಅವನಿಗೆ ನಿಮ್ಮದೊಂದು ಆಟೋಗ್ರಾಫ್ ಬೇಕಿತ್ತು. ನೀವು ಅದನ್ನು ನೆರವೇರಿಸುತ್ತೀರಿ ಎಂದು ನಂಬಿದ್ದೇನೆ. ಈ ಹುಡುಗನ ಪಾಲಿಗೆ ನೀವೇ ಸಾಂತಾ ಕ್ಲಾಸ್ ಆಗಿ. ಜೀವನ ಪರ್ಯಾಂತ ಆತನಿಗೆ ಇದೊಂದು ಸುಂದರ ನೆನಪಾಗಲಿ ಎಂದು ಅವರು ವಿತಿಕಾ ಮನವಿ ಮಾಡಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ನಟ ಅಲ್ಲು ಅರ್ಜುನ್ ಈ ಹುಡುಗನ ಆಸೆಯನ್ನು ನೆರವೇರಿಸಿದ್ದಾರೆ. ಅನಾಥಾಶ್ರಮದಲ್ಲಿರುವ ತನ್ನ ಬಾಲ ಅಭಿಮಾನಿಗೆ  ತನ್ನ ಸಂಬಂಧಿ ಅಯಾನ್ ಮೂಲಕ ಆಟೋಗ್ರಾಫ್ ಕಳುಹಿಸಿಕೊಟ್ಟಿದ್ದಾರೆ. ಈ ಆಟೋ ಗ್ರಾಫ್ ಕಂಡು ಬಾಲಕ ಭಾವುಕನಾಗಿದ್ದಾನೆ.

ಇತ್ತೀಚಿನ ಸುದ್ದಿ

Exit mobile version