1:46 PM Thursday 30 - October 2025

ಅಂಬಲಪಾಡಿ ಗ್ರಾ.ಪಂ. ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಸುಜಾತ ಯೋಗೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಜಾತ ಸುಧಾಕರ್ ಅವಿರೋಧ ಆಯ್ಕೆ

udupi
17/08/2023

ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುಜಾತ ಯೋಗೀಶ್ ಶೆಟ್ಟಿ ಅಂಬಲಪಾಡಿ ಮತ್ತು ಉಪಾಧ್ಯಕ್ಷರಾಗಿ ಸುಜಾತ ಸುಧಾಕರ್ ಕಪ್ಪೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 19 ಸದಸ್ಯ ಬಲ ಹೊಂದಿರುವ ಅಂಬಲಪಾಡಿ ಗ್ರಾಮ ಪಂಚಾಯತ್ 17 ಬಿಜೆಪಿ ಬೆಂಬಲಿತ ಹಾಗೂ 2 ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದೆ.

ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ(ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಪಂ.(ಮಹಿಳೆ) ಮೀಸಲಾತಿ ನಿಗದಿಯಾಗಿತ್ತು.

ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಸುಜಾತ ಯೋಗೀಶ್ ಶೆಟ್ಟಿ ಅಂಬಲಪಾಡಿ ಹಾಗೂ ಬಿಜೆಪಿ ಬೆಂಬಲಿತ ಉಪಾಧ್ಯಕ್ಷರಾಗಿ ಸುಜಾತ ಸುಧಾಕರ್ ಕಪ್ಪೆಟ್ಟು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮಗದೊಮ್ಮೆ ಎರಡೂ ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಪಡೆದಿದ್ದಾರೆ.

ಕುಮಾರಸ್ವಾಮಿ ಎ.ಆರ್., ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಮಲ್ಪೆ, ಬಂದರು ಯೋಜನೆ ಉಡುಪಿ ಇವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಂಚಾಯತ್ ಅಭಿವೃಧ್ದಿ ಅಧಿಕಾರಿ ವಸಂತಿ ಸಹಕರಿಸಿದರು.

ಈ ಸಂಧರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಗ್ರಾ.ಪಂ. ನಿರ್ಗಮನ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ನಿರ್ಗಮನ ಉಪಾಧ್ಯಕ್ಷ ಸೋಮನಾಥ್ ಬಿ.ಕೆ. ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರುಗಳಾದ ರವಿ ಅಮೀನ್ ಬನ್ನಂಜೆ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶಿವಕುಮಾರ್ ಅಂಬಲಪಾಡಿ, ರಾಜೇಂದ್ರ ಪಂದುಬೆಟ್ಟು, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಾಮರಾಜ್ ಕಿದಿಯೂರು, ದಿನೇಶ್ ಅಮೀನ್, ಗಿರೀಶ್ ಅಮೀನ್ ಕಿದಿಯೂರು, ನಾಗರಾಜ್ ಕಿದಿಯೂರು, ರಾಜೀವ್ ಕಿದಿಯೂರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version