2:48 PM Wednesday 20 - August 2025

ಅನಂತ್ ಅಂಬಾನಿ ಮದುವೆಗೆ ಮುನ್ನ 50ಕ್ಕೂ ಅಧಿಕ ಜೋಡಿಗಳಿಗೆ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ

mukesh ambani
02/07/2024

ಮುಂಬೈ: ಮುಕೇಶ್– ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ಐವತ್ತಕ್ಕೂ ಹೆಚ್ಚು ಜೋಡಿಗಳಿಗೆ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದಂಥ ವಧು– ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಯಿತು.

ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ನಲ್ಲಿ ನಡೆದ ವಿವಾಹ ಸಮಾರಂಭವದಲ್ಲಿ ಈ ನೂತನ ದಂಪತಿಗಳ ಕುಟುಂಬದ ಪರವಾಗಿ ಸುಮಾರು 800 ಜನರು ಭಾಗವಹಿಸಿದ್ದರು. ಅನಂತ್– ರಾಧಿಕಾ ಮದುವೆಗೆ ಇದು ಆರಂಭಿಕ ಕಾರ್ಯಕ್ರಮವಾಗಿದ್ದು, ಮುಂದಿನ ಮದುವೆ ಋತುವಿನಲ್ಲಿ ದೇಶದಾದ್ಯಂತ ಈ ರೀತಿಯಾಗಿ ನೂರಕ್ಕೂ ಹೆಚ್ಚು ವಿವಾಹಗಳಿಗೆ ಅಂಬಾನಿ ಕುಟುಂಬದ ಬೆಂಬಲ ದೊರೆಯಲಿದೆ. ಈ ಬಗ್ಗೆ ಸಂಕಲ್ಪವನ್ನೇ ಮಾಡಿಕೊಂಡಿದ್ದಾರೆ.

ಈ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಪ್ರತಿ ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿದಂತೆ ಚಿನ್ನಾಭರಗಳನ್ನು ನೀಡಲಾಯಿತು. ಜೊತೆಗೆ ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣಗಳನ್ನು ಸಹ ನೀಡಲಾಯಿತು. ಇದರ ಜತೆಗೆ ಪ್ರತಿ ವಧುವಿಗೆ ರೂ. 1.01 ಲಕ್ಷ (ಒಂದು ಲಕ್ಷದ ಒಂದು ಸಾವಿರ) ರೂಪಾಯಿಯನ್ನು ತವರು ಮನೆಯಿಂದ ನೀಡುವಂಥ ಸ್ತ್ರೀಧನದ ರೂಪದಲ್ಲಿ ಕೊಡಲಾಯಿತು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ದಂಪತಿಗೂ ಒಂದು ವರ್ಷಕ್ಕೆ ಸಾಕಾಗುವಂಥ ದಿನಸಿ, ಗೃಹೋಪಯೋಗಿ ವಸ್ತುಗಳನ್ನು ಕೊಡಲಾಯಿತು. ಈ ಗೃಹೋಪಯೋಗಿ ವಸ್ತುಗಳಲ್ಲಿ 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌ, ಮಿಕ್ಸರ್ ಮತ್ತು ಫ್ಯಾನ್, ಹಾಗೆಯೇ ಹಾಸಿಗೆ ಮತ್ತು ದಿಂಬುಗಳು ಇದ್ದವು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version