ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಶ್ರಮದಾನ

arantodu
25/06/2023

ಅರಂತೋಡು ಗ್ರಾಮದ ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 23 ರಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕರಾದ ಲೋಲಾಕ್ಷಿಯವರು ಮಾತನಾಡಿ,  ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆಯನ್ನು ಸಲ್ಲಿಸಿದರು.

ಬಳಿಕ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮುಖಂಡರ ಬಳಿ ಮನವಿ ಮಾಡಿ ನಮ್ಮ ಶಾಲೆಯಲ್ಲಿ ಸರಿಯಾದ ಶೌಚಾಲಯ ಇಲ್ಲದಿರುವುದರಿಂದ ಮಕ್ಕಳು ಸರಿಯಾಗಿ ಶಾಲೆಗೆ ಬರುವುದಿಲ್ಲ ಮತ್ತು ನಮ್ಮ ಶಾಲೆಗೆ ಬರುವಂತ ರಸ್ತೆಗೆ ಕಾಂಕ್ರೀಟೀಕರಣ   ಮಾಡಿಕೊಡಬೇಕೆಂದು ಹಲವು ಬಾರಿ ಅರಂತೋಡು ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದೇವೆ.

ಸಂಘಟನೆಯ ಸಹಕಾರದಿಂದ ಶೌಚಾಲಯ ಕಟ್ಟಡ ಮತ್ತು ರಸ್ತೆ ಅಭಿವೃದ್ಧಿಯ ಕುರಿತು ಸಹಕರಿಸುವಂತೆ ಈ ಸಂದರ್ಭದಲ್ಲಿ ಅವರು ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ  ಪಿ.ಸುಂದರ ಪಾಟಾಜೆ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ಸುಳ್ಯ ತಾಲೂಕು ಘಟಕ ಅಧ್ಯಕ್ಷ ರಮೇಶ್ ಕೊಡಂಕೀರಿ, ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಅರಂತೋಡು ಘಟಕ ಅಧ್ಯಕ್ಷ ನವೀನ್ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಧಾಕೃಷ್ಣ ಅರಮನೆಗಯ, ನಿರ್ದೇಶಕರುಗಳಾದ ಚಂದ್ರಶೇಖರ ಕೋಂಪುಳಿ, ಕಿಟ್ಟು ಅಜಿಲ, ಧನಂಜಯ ಕೋಂಪುಳಿ, ಸೀತಾರಾಮ ಅರಮನೆಗಯ,ರಾಧಾಕೃಷ್ಣ ಬೆದ್ರಕಾಡು,ಲಕ್ಷ್ಮೀಶ ಬಳ್ಳಕಾನ, ವಿಜಯ್ ಕುಮಾರ್ ಆಲೆಟ್ಟಿ ಹಾಗೂ ಸ್ಥಳೀಯರಾದ ಪುಷ್ಪಾವತಿ ರಾಧಿಕಾ,ಪವಿತ್ರ,ಉಷಾ,ವೇದಾವತಿ, ವಸಂತಿ, ವೀಣಾ,  ನಮಿತಾ, ವೇದಾವತಿ, ಮೊದಲಾದವರು  ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version