12:16 AM Wednesday 21 - January 2026

ಮನಪಾ ಕದ್ರಿ ವಾರ್ಡ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

14/04/2025

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ವಾರ್ಡ್ ಕಛೇರಿಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷರು ಅನಿಲ್ ಕುಮಾರ್  ಮತ್ತು ಪೌರಕಾರ್ಮಿಕ ಸಂಘದ ಸದಸ್ಯರುಗಳಾದ ನಾಗೇಶ್, ಉಮೇಶ, ರಾಜ, ಶಶಿಕಲಾ, ನೀಲಮ್ಮ, ರತ್ನಬಾಯಿ, ಶೀನ, ಸುಂದರ, ಲೋಕೇಶ್, ಮಂಜುನಾಥ್, ಹಾಗೂ ಇನ್ನೂ ಪೌರಕಾರ್ಮಿಕರು ಭಾಗವಹಿಸಿದ್ದು, ಅವರು ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾಪರ್ಣನೆ ಮಾಡಿದರು.

kadri ward

ಕದ್ರಿ ವಾರ್ಡಿನ ಎಲ್ಲ ಪೌರಕಾರ್ಮಿಕರು ಭಾಗವಹಿಸಿ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು, ಎಲ್ಲರಿಗೂ ಡಿ.ಎಸ್.ಎಸ್., ಜಿಲ್ಲಾ ಸಂಚಾಲಕರು ದಕ್ಷಿಣ ಕನ್ನಡ  ಜಿಲ್ಲಾ ಪೌರಕಾರ್ಮಿಕ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಆನಂದ್  ಅಭಿನಂದನೆ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version