ದೇವೇಶ್ ಆಯ್ತು, ಇದೀಗ ಬಿಷ್ಣು: ನನಗೆ ಮತ ನೀಡ್ದಿದ್ರೆ ಹುಷಾರ್ ಎಂದ ಅಂಡಮಾನ್ ಸಂಸದ

ಯಾದವರು ಮತ್ತು ಮುಸ್ಲಿಮರಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಬೆನ್ನಿಗೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಸದ ಬಿಷ್ಣು ಪಡ ರೇ ಇಂತಹದ್ದೇ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.
ನನಗೆ ಮತ ನೀಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿಕೋಬಾರ್ ಮತದಾರರಿಗೆ ಬಿಷ್ಣು ಪಡ ರೇ ಬೆದರಿಕೆ ಒಡ್ಡಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮಾರನೆಯ ದಿನವಾದ ಜೂನ್ 5ರಂದು ಈ ವಿಡಿಯೊ ಬೆಳಕಿಗೆ ಬಂದಿದ್ದರೂ, ಇತ್ತೀಚೆಗೆ ರೇ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಈ ವಿಡಿಯೊ ವೈರಲ್ ಆಗಿದೆ.
ನಿಕೋಬಾರ್ ದ್ವೀಪವು ನನಗೆ ಯಾವುದೇ ಮತ ನೀಡಿಲ್ಲ. ಈಗ ನಿಮಗೇನಾಗಲಿದೆ ಎಂಬುದನ್ನು ಯೋಚಿಸಿ” ಎಂದು ಆ ವಿಡಿಯೊದಲ್ಲಿ ರೇ ಬೆದರಿಕೆ ಒಡ್ಡಿದ್ದಾರೆ ಎಂದು indianexpress.com ವರದಿ ಮಾಡಿದೆ.
“ನಿಕೋಬಾರ್ ಹೆಸರಲ್ಲಿ ನೀವು ಹಣ ತೆಗೆದುಕೊಳ್ಳುತ್ತೀರಿ, ಮದ್ಯ ಕುಡಿಯುತ್ತೀರಿ, ಆದರೆ ಮತ ನೀಡುವುದಿಲ್ಲ. ಎಚ್ಚರವಾಗಿರಿ, ಎಚ್ಚರವಾಗಿರಿ, ಎಚ್ಚರವಾಗಿರಿ, ಈಗ ನಿಮ್ಮ ದಿನಗಳ ಕೆಟ್ಟದಾಗಿವೆ. ನೀವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಇನ್ನು ಮುಂದೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನಿಮ್ಮ ದಿನಗಳು ಇನ್ನು ಉತ್ತಮವಾಗಿರಲು ಸಾಧ್ಯವಿಲ್ಲ” ಎಂದೂ ಅವರು ಎಚ್ಚರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth