ಸಿಎಂ ಆದ ಬೆನ್ನಲ್ಲೇ ನ್ಯೂಸ್ ಚಾನೆಲ್ ಗಳ ಮೇಲೆ ದಾಳಿ: ನಾಲ್ಕು ಟಿವಿ ಚಾನೆಲ್ ಗಳ ಪ್ರಸಾರಕ್ಕೆ ತಡೆ ಹೇರಿದ ನಾಯ್ಡು

24/06/2024

ಅಧಿಕಾರಕ್ಕೆ ಬಂದ ತಕ್ಷಣ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಧ್ಯಮಗಳ ಮೇಲೆ ಪ್ರಹಾರ ನಡೆಸಿದ್ದಾರೆ. ನಾಲ್ಕು ಟಿವಿ ಚಾನೆಲ್ ಗಳ ಪ್ರಸಾರಕ್ಕೆ ತಡೆ ಹೇರಿದ್ದಾರೆ. ಟಿವಿ9,, ಎನ್ ಟಿವಿ, ಟೆನ್ ಟಿವಿ ಮತ್ತು ಸಾಕ್ಷಿ ಟಿವಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಹೇಳಲಾಗಿದೆ.

ಕೇಬಲ್ ಟಿವಿ ಆಪರೇಟರ್ ಗಳು ಈ ಟಿವಿ ಚಾನೆಲ್ಗಳ ಪ್ರಸಾರವನ್ನು ತಡೆಹಿಡಿದಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸದಸ್ಯ ಎಸ್ ನಿರಂಜನ್ ರೆಡ್ಡಿ ಟ್ರಾಾಯಿಗೆ ದೂರು ನೀಡಿದ್ದಾರೆ. ಚಂದ್ರ ಬಾಬು ನಾಯ್ಡು ಸರಕಾರದ ಒತ್ತಡದ ಮೇರೆಗೆ ಕೇಬಲ್ ಆಪರೇಟರ್ಸ್ ಗಳು ಈ ನಾಲ್ಕು ಚಾನೆಲ್ಗಳ ಪ್ರಸಾರವನ್ನು ತಡೆಹಿಡಿದಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ಕುಟುಂಬದೊಂದಿಗೆ ಸಾಕ್ಷಿ ಚಾನಲ್ಗೆ ಸಂಬಂಧ ಇದೆ. ಈ ನಾಲ್ಕು ಚಾನೆಲ್ ಗಳು ಜಗನ್ ಮೋಹನ್ ರೆಡ್ಡಿ ಅವರ ಪರ ಇದೆ ಎಂಬ ಭಾವನೆ ಇದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version