ಬಯಲಾಯ್ತು ಬಿ.ಆರ್.ಪಾಟೀಲ್ ಮತ್ತೊಂದು ಮುಖ: ಸಿಎಂ ಸಿದ್ದರಾಮಯ್ಯ ಮೇಲೆ ಅಸೂಯೆ?

01/07/2025

ಬೆಂಗಳೂರು:  ಇಲ್ಲಿಯವರೆಗೆ ಸಚಿವರ ವಿರುದ್ಧ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಅಸಮಾಧಾನ ಹೊಂದಿದ್ದರು ಎನ್ನಲಾಗಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಪಾಟೀಲ್ ಅಸಮಾಧಾನ, ಅಸೂಯೆ ಹೊಂದಿದ್ದಾರೆ ಎನ್ನುವಂತಹ ವಿಡಿಯೋವೊಂದು ವೈರಲ್ ಆಗ್ತಿದೆ.

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಅವನ ಗ್ರಹಚಾರ ಚೆನ್ನಾಗಿತ್ತು, ಅದಕ್ಕೆ ಸಿಎಂ ಆಗಿ ಬಿಟ್ಟ ಎಂದು ಹಿರಿಯ ಶಾಸಕ ಬಿ.ಆರ್ ಪಾಟೀಲ್ ಹೇಳಿರುವ ವಿಡಿಯೋವೊಂದು ಇದೀಗ ಸಂಚಲನ ಮೂಡಿಸಿದೆ.

ವಸತಿ ನಿಗಮದಲ್ಲಿ `ಮನಿ ಇದ್ರೆ ಮನೆ’ ಎಂಬ ಆಡಿಯೋ ವಿವಾದದ ಬಳಿಕ ಇದೀಗ ಸಿಎಂ ವಿಚಾರವಾಗಿ ವಿಡಿಯೋವೊಂದು ಚರ್ಚೆಗೆ ಕಾರಣವಾಗಿದೆ.

ವಿಡಿಯೋದಲ್ಲಿ, ಫೋನ್ ನಲ್ಲಿ ಮಾತನಾಡುತ್ತಿರುವ ಬಿ.ಆರ್.ಪಾಟೀಲ್  ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನೇ ನಾನೇ. ಆದರೆ ಅವನ ಗ್ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗಿಬಿಟ್ಟ. ನನಗೆ ಗಾಡು ಇಲ್ಲ, ಫಾದರು ಇಲ್ಲ ಎಂದು ಹೇಳಿದ್ದಾರೆ.

ವಸತಿ ಗೋಲ್ಮಾಲ್ ಬಗ್ಗೆ ಆಡಿಯೋ ವೈರಲ್ ಆದ ಬಳಿಕ ಅದು ನನ್ನದೇ ಆಡಿಯೋ ಎಂದು ಒಪ್ಪಿಕೊಂಡಿದ್ದರು. ಇದೀಗ ಬಿ.ಆರ್ ಪಾಟೀಲ್ ಸಿಎಂ ವಿರುದ್ಧವೂ ಅಸೂಯೆಯಿಂದ ಮಾತನಾಡುತ್ತಿರುವ ವಿಡಿಯೋ ಸಂಚಲನ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version