10:26 AM Wednesday 20 - August 2025

ಬಿಮ್ಸ್ ನಲ್ಲಿ ಮತ್ತೋರ್ವಳು ಬಾಣಂತಿ ಸಾವು: ಮುಂದುವರಿದ ಬಾಣಂತಿಯರ ಸರಣಿ ಸಾವು

mahalakshmi
27/11/2024

ಬಳ್ಳಾರಿ: ಹೆರಿಗೆ ಬಳಿಕ ಮಹಿಳೆಯೊಬ್ಬರು ಸಾವನ್ನಪ್ಪಿರುವ ಮತ್ತೊಂದು ಘಟನೆ ಜಿಲ್ಲಾಸ್ಪತ್ರೆ ಬಿಮ್ಸ್ ನಲ್ಲಿ ನಡೆದಿದ್ದು, ಈ ಮೂಲಕ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮುಂದುವರಿದಿದೆ.

ಕೂಡ್ಲಿಗೆ ತಾಲೂಕಿನ ಹಾಲಸಾಗರ ಗ್ರಾಮದ ಮಹಾಲಕ್ಷ್ಮೀ(20) ಸಾವನ್ನಪ್ಪಿದ ದುರ್ದೈವಿ. ಇವರಿಗೆ ಭಾನುವಾರ ನಾರ್ಮಲ್ ಡೆಲಿವರಿಯಾಗಿತ್ತು. ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಐಸಿಯುನಲ್ಲಿ 3 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಹಾಲಕ್ಷ್ಮೀ ಸಾವನ್ನಪ್ಪಿದ್ದರು.

ಮಹಾಲಕ್ಷ್ಮೀಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಮಹಾಲಕ್ಷ್ಮೀ ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನ ಮಹಾಲಕ್ಷ್ಮೀ ಚೆನ್ನಾಗಿದ್ದಳು ಎಂದು ಕುಟುಂಬಸ್ಥರು ದೂರಿದ್ದಾರೆ.

ಮಹಾಲಕ್ಷ್ಮೀ ಕುಟುಂಬಸ್ಥರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಬಿಮ್ಸ್ ವೈದ್ಯರು, ಮಹಾಲಕ್ಷ್ಮೀಗೆ ಅನಿಮಿಯಾ ಇತ್ತು, ಮೊದಲು ಕೂಡ್ಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಆರೋಗ್ಯ ಏರುಪೇರಾಗಿತ್ತು. ನಂತರ ಇಲ್ಲಿ ಕರೆತಂದಿದ್ದರು, ನಾವು ಮೊದಲೇ ತಿಳಿಸಿದ್ದೆವು, ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಎಂದು ನಿರ್ದೇಶಕ ಗಂಗಾಧರ ಗೌಡ ಸ್ಪಷ್ಟನೆ ನೀಡಿದ್ದಾರೆ.

ಬಿಮ್ಸ್ ನಲ್ಲಿ ಇತ್ತೀಚೆಗಷ್ಟೇ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರು ಸಾವನ್ನಪ್ಪಿದ್ದರು. ಸೋಮವಾರ ರಾತ್ರಿ ಹೊಸಪೇಟೆ ಮೂಲದ ಮುಸ್ಕಾನ್ ಎಂಬವರೂ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮಹಾಲಕ್ಷ್ಮೀ ಸಾವನ್ನಪ್ಪಿದ್ದು, ಬಾಣಂತಿಯರ ಸರಣಿ ಸಾವು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version