7:00 PM Wednesday 22 - October 2025

ಹೀಗೂ ಉಂಟಾ: ಆನ್ ಲೈನ್ ನಲ್ಲೇ ಮದುವೆಯಾದ ಭಾರತದ ಯುವಕ, ಪಾಕಿಸ್ತಾನದ ಯುವತಿ..!

07/08/2023

ಮೊನ್ನೆ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್. ಅತ್ತ ಪ್ರಿಯಕರನಿಗಾಗಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು. ಇವರಿಬ್ಬರ ಕಥೆ ಒಂದು ಕಡೆಯಾದ್ರೆ ಈ ಮೂರನೇ ಜೋಡಿಯ ಕಥೆ ಬೇರೆಯದ್ದೇ. ರಾಜಸ್ಥಾನದ ಜೋದ್‌ಪುರ ಮೂಲದ ಅರ್ಬಾಜ್ ಹಾಗೂ ಪಾಕಿಸ್ತಾನದ ಮೂಲದ ವಧು ಅಮೀನಾ ವರ್ಚುವಲ್ ಮೂಲಕ ಮದ್ವೆ ಆಗಿದ್ದಾರೆ.

ಅರ್ಬಾಜ್ ಹಾಗೂ ಅಮೀನಾ ಕುಟುಂಬ ಸಂಬಂಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಹಿನ್ನೆಲೆ ಎರಡು ಕುಟುಂಬದ ನಡುವೆ ಮದುವೆ ಮಾತುಕತೆ ನಡೆದು, ವಿಡಿಯೋ ಕಾಲ್ ನಲ್ಲೇ ವಿವಾಹ ನಡೆದುಹೋಗಿದೆ.

ಅರ್ಬಾಜ್ ಮದುವೆ ದಿಬ್ಬಣ ಜೋದ್‌ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕಿಸ್ತಾನದಲ್ಲಿರುವ ವಧು ಅಮೀನಾರೊಂದಿಗೆ ವಿವಾಹವಾಗಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.

ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ, ವರ್ಚುವಲ್ ವಿವಾಹ ನೆರವೇರಿದೆ. ಪಾಕಿಸ್ತಾನಕ್ಕೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ಅರ್ಬಾಜ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version