ವೈದ್ಯ ಸೇರಿದಂತೆ 9 ಮಂದಿ ಭ್ರೂಣಹತ್ಯೆಕೋರರ ಬಂಧನ:  ಪ್ರತಿ ತಿಂಗಳು 20 ರಿಂದ 25 ಭ್ರೂಣ ಹತ್ಯೆ

bangalore
25/11/2023

ಬೆಂಗಳೂರು: ವೈದ್ಯರು ಸೇರಿದಂತೆ ಒಟ್ಟು‌ 9 ಮಂದಿ ಭ್ರೂಣಹತ್ಯೆಗಾರರನ್ನು ಬೆಂಗಳೂರಿನ‌ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಉದಯಗಿರಿ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 20 ರಿಂದ 25 ಭ್ರೂಣ ಹತ್ಯೆ  ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೊದಲು ಭ್ರೂಣ ಹತ್ಯೆ ಮಾಡುತ್ತಿದ್ದ ಆರೋಪದ ಮೇಲೆ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್  ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಈ ಪ್ರಕರಣದ ಹಿಂದಿರುವ ವೈದ್ಯರ ಹೆಸರು ಕೇಳಿಬಂದಿತ್ತು.

ಬಳಿಕ ತನಿಖೆ  ಮುಂದುವರಿಸಿದ ಪೊಲೀಸರು ಕೃತ್ಯದ ಹಿಂದಿದ್ದ ಚೆನ್ನೈ ಮೂಲದ ಡಾ.ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಎಂಬವರನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಒಟ್ಟು 9 ಮಂದಿ ಸೇರಿ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದರು. ಪ್ರತಿ ತಿಂಗಳು 20 ರಿಂದ 25 ಭ್ರೂಣ ಹತ್ಯೆ ಮಾಡುತ್ತಿದ್ದರು. ಮೈಸೂರಿನ ಉದಯಗಿರಿಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

Exit mobile version