ರಾಜ್ಯ ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಪಡೆಯುವ ಅಧಿಕಾರವಿಲ್ಲ: ಹೈಕೋರ್ಟ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರಾಗಿದ್ದ ನಂಜುಂಡಯ್ಯ ಅವರ ಮೊದಲನೇ ಮದುವೆ ಪಿಂಚಣಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಪಡೆಯುವ ಅಧಿಕಾರವಿಲ್ಲ ಎಂದು ಆದೇಶಿಸಿದೆ.
ರಾಜ್ಯ ಸರ್ಕಾರಿ ನೌಕರಾಗಿದ್ದ ನಂಜುಂಡಯ್ಯ ಅವರ ಮೊದಲನೇ ಮದುವೆ ಕಾನೂನು ಬದ್ಧವಾಗಿಯೇ ಉಳಿದಿದ್ದು, ಹೀಗಾಗಿ ಆತನ ಎರಡನೇ ಮದುವೆ ಕಾನೂನು ಬಾಹಿರವಾಗಿದೆ. ಹೀಗಾಗಿ ಎರಡನೇ ಪತ್ನಿ ಎಂದೆನಿಸಿಕೊಂಡವಳಿಗೆ ಪಿಂಚಣಿ ಪಡೆಯುವ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್, ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಆದೇಶಿಸಿದ್ದು ಅವರ ಅರ್ಜಿಯನ್ನು ವಜಾಗೊಳಿಸಿದೆ.
ಮರಣಿಸಿದ ನೌಕರನ ಮೊದಲ ಮದುವೆ ರದ್ದುಗೊಂಡಿಲ್ಲ. ಹೀಗಾಗಿ ಎರಡನೇ ಮದುವೆಗೆ ಕಾನೂನು ಮಾನ್ಯತೆ ಇಲ್ಲ. ಆದ್ದರಿಂದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎರಡನೇ ಹೆಂಡತಿಯಾಗಿದ್ದರೂ ಆಕೆಗೂ ಪಿಂಚಣಿ ಪಡೆಯುವ ಅಧಿಕಾರವಿದೆ ಎಂದು ಮೇಲ್ಮನವಿದಾರರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಪೀಠವು ಕಾನೂನುಬದ್ಧವಾಗಿ ವಿವಾಹವಾದ ಹೆಂಡತಿಯಲ್ಲದ ಕಾರಣ ಕುಟುಂಬ ಪಿಂಚಣಿ ಅನುದಾನ ನೀಡಲು ನಿರಾಕರಿಸಿದೆ.