ಬೆಳ್ತಂಗಡಿ: ಅಸಹಜ ಸ್ಥಿತಿಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ: ಬಾಲಕಿಯ ಸಾವಿನ ಸುತ್ತ ಅನುಮಾನ!
ಬೆಳ್ತಂಗಡಿ: ಗೇರುಕಟ್ಟೆಯ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಧಿನಿಯೋರ್ವಳು ಅಸಹಜ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಮೃತ ವಿದ್ಯಾರ್ಥಿನಿ ಆಸಿಫಾ(16) ಎಂದು ಗುರುತಿಸಲಾಗಿದೆ. ಕುಪ್ಪೆಟ್ಟಿ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರಿಯಾಗಿರುವ ಇವರು, ಗೇರುಕಟ್ಟೆಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಳು.
ಇಂದು ಬೆಳಿಗ್ಗೆ ಗೇರುಕಟ್ಟೆ ಬಸ್ ನಿಲ್ದಾಣದಿಂದ ಬಸ್ ಇಳಿದು ಶಾಲೆಗೆಂದು ಬರುತ್ತಿದ್ದವಳು ಅಲ್ಲಿಯೇ ಸಮೀಪವಿರುವ ಮನೆಯೊಂದಕ್ಕೆ ತೆರಳಿ ಶೌಚಾಲಯಕ್ಕೆ ಹೋಗಿದ್ದಾಳೆ ಶೌಚಾಲಯಕ್ಕೆ ಹೋದವಳು ಹೊರಬರದಿದ್ದಾಗ ಮನೆಯವರು ಕರೆದರೂ ಯಾವುದೇ ಉತ್ತರ ಬಾರದಿದ್ದಾಗ, ಅವರು ಶಾಲೆಯವರಿಗೆ ಸ್ಥಳೀಯ ಗ್ರಾಪಂ ಸದಸ್ಯ ಅಬ್ದುಲ್ ಕರೀಂ ಅವರಿಗೆ ಮಾಹಿತಿ ನೀಡಿದ್ದಾರೆ, ಶೌಚಾಲಯದ ಬಾಗಿಲು ತೆರೆದು ನೋಡಿದಾಗ ವಿದ್ಯಾರ್ಥಿನಿ ನರಳಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಅವರನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಆಕೆ ಮೃತಪಟ್ಟಿದ್ದಳು.ವಿದ್ಯಾರ್ಥಿನಿ ಯಾವ ರೀತಿಯಾಗಿ ಮೃತಪಟ್ಟಿರಬಹುದು ಎಂಬ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ. ಬಳಿಕವಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























