12:13 AM Saturday 23 - August 2025

ಅಸ್ಪೃಶ್ಯತೆಗೆ ಸೆಡ್ಡು ಹೊಡೆದ ದಲಿತ ಯುವಕರು | ಸಮುದಾಯದ ಮನೆ ಬಾಗಿಲಿಗೆ ತೆರಳಿ ಹೇರ್ ಕಟ್ ಮಾಡುತ್ತಿರುವ ಸ್ವಾಭಿಮಾನಿಗಳು

haircut
16/04/2021

ಮೈಸೂರು: ಜಿಲ್ಲೆಯ ಕಪ್ಪಸೋಗೆ ಗ್ರಾಮದಲ್ಲಿರುವ ದಲಿತ ಸಮುದಾಯದ ಇಬ್ಬರು ಯುವಕರು ತಮ್ಮ ಊರು ಅಲ್ಲದೇ ಅಕ್ಕಪಕ್ಕದ ಕುರುಹುಂಡಿ, ಗೌಡರಹುಂಡಿ ಹಾಗೂ ಮದನಹಳ್ಳಿ ಗ್ರಾಮದಲ್ಲಿರುವ ದೊಡ್ಡ ಸಂಖ್ಯೆಯ ದಲಿತ ಜನಾಂಗದ ಮಂದಿಗೆ ಉಚಿತ ಹೇರ್‌ಕಟಿಂಗ್ ಸೇವೆ ಮಾಡುತ್ತಿದ್ದಾರೆ.

 

ಈ ಊರುಗಳಲ್ಲಿ ಸಮುದಾಯದ ಜನರಿಗೆ ಹೇರ್‌ಕಟ್ ಮಾಡಲು ಕಟಿಂಗ್ ಅಂಗಡಿಗಳು ನಿರಾಕರಿಸಿದ ಕಾರಣ ಕೆಪಿ ಮಹಾದೇವ ಹಾಗೂ ಕೆಪಿ ಸಿದ್ಧರಾಜು ಹೆಸರಿನ ಈ ಅಣ್ಣತಮ್ಮಂದಿರು ತಮ್ಮ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಈ ಕೆಲಸ ಮಾಡುತ್ತಿದ್ದಾರೆ.

 

ಈ ಹಿಂದೆ ಪಕ್ಕದ ಹಳ್ಳಿಗೆ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಬೇಕಿತ್ತು. ಆದರೆ ಇದೀಗ ಸಹೋದರರು ಸಮುದಾಯದ ಮನೆಯ ಬಾಗಿಲಿಗೆ ಬಂದು ಹೇರ್ ಕಟ್ ಮಾಡಿಸಿಕೊಡುತ್ತಿದ್ದಾರೆ ಅದು ಕೂಡ ಉಚಿತವಾಗಿದೆ.

 

ಇನ್ನೂ ಅಸ್ಪೃಷ್ಯತೆಯ ನಡುವೆ ಇಂತಹದ್ದೊಂದು ಸ್ವಾಭಿಮಾನಿ ಹೋರಾಟ ಆರಂಭವಾಗಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಹಣ ನೀಡಿ ಹೇರ್ ಕಟ್ ಮಾಡಿಸಿಕೊಳ್ಳಿ ಎಂದೂ ಕೆಲವರು ಸಲಹೆ ಮಾಡಿದ್ದಾರೆ.

 

ಇನ್ನೂ ಮೈಸೂರಿನಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆಯ ವಿರುದ್ಧ ಇಂತಹದ್ದೊಂದು ಸ್ವಾಭಿಮಾನಿ ಹೋರಾಟಕ್ಕೆ ಸಮುದಾಯ ಹಾಗೂ ಸಮುದಾಯದ ನಾಯಕರು ಬೆನ್ನೆಲುಬಾಗಿ ನಿಲ್ಲಬೇಕು. ಮೈಸೂರು ಹಾಗೂ ನೆರೆಯ ಜಿಲ್ಲೆಗಳ ದಲಿತ ಶಾಸಕರು, ದಲಿತ ಸಂಸದರು, ಅಥವಾ ಮಾಜಿ ಶಾಸಕ, ಸಂಸದರು ಈ ಬಗ್ಗೆ ಗಮನ ಹರಿಸಿ, ಈ ಯುವಕರಿಗೆ ಸೆಲೂನ್ ಹಾಕಿಸಿಕೊಡಲು ಸಹಕಾರ ನೀಡಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version