10:35 PM Wednesday 22 - October 2025

ಪೊಲೀಸರ ಎದುರೇ ನಡೀತು ಶೂಟೌಟ್: ಕೊಲೆ ಆರೋಪಿಯನ್ನು ಅಡ್ಡಗಟ್ಟಿ ಗುಂಡಿಕ್ಕಿ ಕೊಂದ ಗುಂಪು..!

12/07/2023

ಪೊಲೀಸರ ರಕ್ಷಣೆಯಲ್ಲಿದ್ದ ವೇಳೆ ನಡೆದ ಶೂಟೌಟ್‌ ಪ್ರಕರಣ.. ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಪ್ರಕರಣ.. ಹೌದು. ಭರತ್‌ಪುರದಲ್ಲಿ ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯುವ ವೇಳೆ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಎಂಟು ಜನರ ಗುಂಪೊಂದು ಅಡ್ಡಗಟ್ಟಿ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

ಮತ್ತೊಬ್ಬ ಕೊಲೆ ಆರೋಪಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.  ಭರತ್‌ ಪುರದ ಹಲೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಬೈಕ್‌ ಗಳಲ್ಲಿ ಬಂದ ಸುಮಾರು 8 ಮಂದಿ ಪೊಲೀಸರು ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಬಸನ್ನು ತಡೆದಿದ್ದಾರೆ.

ಬಳಿಕ ಬಸ್ಸಿನೊಳಗೆ ನುಗ್ಗಿದ ಅವರು ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿ, ಆರೋಪಿಗಳಾದ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಮೇಲೆ ಗುಂಡು ಹಾರಿಸಿದ್ದಾರೆ.

2022 ರಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಗಳಾದ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಅವರನ್ನು ಜೈಪುರದಿಂದ ಭರತ್‌ ಪುರಕ್ಕೆ ಏಳು ಪೊಲೀಸರ ತಂಡವು ಸಾರ್ವಜನಿಕ ಬಸ್‌ ನಲ್ಲಿ ಕರೆದೊಯ್ಯುತ್ತಿತ್ತು.

ಸಿಸಿಟಿವಿ ದೃಶ್ಯಾವಳಿಗಳ ಸಹಾಯಗಳಿಂದ ದಾಳಿ ಮಾಡಿದ ಆರೋಪಿಗಳನ್ನು ಗುರುತಿಸಲಾಗಿದ್ದು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರ ಭದ್ರತೆ ದೃಷ್ಟಿಯಿಂದ ಪೊಲೀಸ್ ತಂಡವು ಪ್ರತಿಯಾಗಿ ಗುಂಡಿನ ದಾಳಿ ನಡೆಸಿಲ್ಲ. ಯಾವುದೇ ಪೋಲೀಸರು ನಿರ್ಲಕ್ಷ್ಯ ತೋರಿರುವ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version