7:53 AM Wednesday 17 - September 2025

ಬೇರೆ ಮದುವೆಯಾಗಲು ಮುಂದಾದ ಸ್ನೇಹಿತನಿಗೆ ಬಿಸಿ ನೀರು ಎರಚಿ, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಯುವತಿ

banglore
30/05/2023

ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಮೇಲೆ ಬಿಸಿ ನೀರು ಎರಚಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.

ಮೇ 25 ರ ರಾತ್ರಿ ಈ ಘಟನೆ ನಡೆದಿದ್ದು, ಕಲಬುರಗಿ ಮೂಲದ ಭೀಮಾಶಂಕರ ಆರ್ಯ ಎಂಬಾತನಿಗೆ ಗಾಯಗಳಾಗಿವೆ. ಕಲಬುರಗಿ ಜಿಲ್ಲೆಯ ಅಫಜಲಪುರ ಮೂಲದ ಮಹಿಳೆ ಈ ಕೃತ್ಯ ನಡೆಸಿದ್ದಾಳೆ.

ಗಾಯಾಳು ಭೀಮಾಶಂಕರ ಮತ್ತು ಮಹಿಳೆ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಇದಾದ ಕೆಲವೇ ದಿನಗಳಲ್ಲಿ ಮಹಿಳೆಗೆ ಈ ಮೊದಲೇ ಮದುವೆಯಾಗಿದೆ ಎಂಬ ವಿಚಾರ ಯುವನಿಗೆ ತಿಳಿದಿದೆ. ಹೀಗಾಗಿ ಆತ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಇಷ್ಟೇ ಅಲ್ಲದೇ ತಾನು ವಾಸವಿದ್ದ ಚಾಮರಾಜಪೇಟೆ ಬಾಡಿಗೆ ರೂಂ ಕೂಡಾ ಆತ ಮಹಿಳೆಗೆ ಬಿಟ್ಟು ಕೊಟ್ಟಿದ್ದ.

ಆದರೆ ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾದ ಬಳಿಕ ಭೀಮಾಶಂಕರ ಮತ್ತೆ ಬೆಂಗಳೂರಿಗೆ ಬಂದಿದ್ದ. ಈ ವಿಚಾರ ತಿಳಿದ ಮಹಿಳೆ ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ರೂಮಿಗೆ ಕರೆದಿದ್ದಾಳೆ.

ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ಭೀಮಾಶಂಕರ ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದ. ಇದರಿಂದ ಕುಪಿತಗೊಂಡ ಮಹಿಳೆ ಏಕಾಏಕಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ್ದಾಳೆ. ಅಲ್ಲದೇ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version