7:06 PM Wednesday 10 - December 2025

ದುಷ್ಟಶಕ್ತಿಯನ್ನು ಓಡಿಸುತ್ತೇನೆಂದ ಜ್ಯೋತಿಷಿ, 5 ಲಕ್ಷ ಹಣ ಪಡೆದು ತಾನೇ ಓಡಿದ!:  ಮಹಿಳೆಗೆ ಮೋಸ!

black magic
14/05/2025

ಬೆಂಗಳೂರು: ನಿಮ್ಮನ್ನು ಹಿಡಿದುಕೊಂಡಿರುವ ದುಷ್ಟ ಶಕ್ತಿಯನ್ನು ಓಡಿಸುತ್ತೇನೆಂದ ಜ್ಯೋತಿಷಿಯೊಬ್ಬ ಮಹಿಳೆಗೆ 5 ಲಕ್ಷ ರೂಪಾಯಿ ವಂಚಿಸಿ, ತಾನೇ ಸಂಪರ್ಕಕ್ಕೆ ಸಿಗದೇ ಓಡಿ ಹೋಗಿರುವ ಘಟನೆಯೊಂದು ವರದಿಯಾಗಿದ್ದು, ಬೆಂಗಳೂರಿನ ವಿಭೂತಿಪುರದ ನಿವಾಸಿಯಾಗಿರುವ 33 ವರ್ಷದ ಮಹಿಳೆ ವಂಚನೆಗೊಳಲಾಗಿದ್ದಾರೆ.

2023ರ ಡಿಸೆಂಬರ್ ನಲ್ಲಿ ಮಹಿಳೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಕೈ ಕಾಲುಗಳು ಊದಿಕೊಂಡಿದ್ದವು. ಈ ವಿಚಾರವನ್ನು ಮಹಿಳೆ ತನ್ನ ಸ್ನೇಹಿತರೊಬ್ಬರಿಗೆ ಹೇಳಿದ್ದರು. ಈ ವೇಳೆ ಸ್ನೇಹಿತರು ಓರ್ವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಮಹಿಳೆಯನ್ನು ಗಮನಿಸಿದ ಜ್ಯೋತಿಷಿ, ನಿಮ್ಮನ್ನು 15 ದುಷ್ಟ ಶಕ್ತಿಗಳು ಕಾಡುತ್ತಿವೆ. ಪೂಜೆ ಮಾಡಿದರೆ ದುಷ್ಟ ಶಕ್ತಿಗಳನ್ನ ಓಡಿಸಬಹುದು ಎಂದು ರೀಲ್ ಬಿಟ್ಟಿದ್ದಾನೆ.

ಜ್ಯೋತಿಷಿಯ ಮಾತನ್ನು ನಂಬಿದ ಮಹಿಳೆ ವಿವಿಧ ಹಂತಗಳಲ್ಲಿ 5 ಲಕ್ಷ ರೂಪಾಯಿಗಳನ್ನು ಮಹಿಳೆಯ ಕೈಯಿಂದ ಪಡೆದುಕೊಂಡಿದ್ದಾನೆ. ಬಳಿಕ  2024ರ ಸೆಪ್ಟಂಬರ್ ನಲ್ಲಿ ಕೋರಮಂಗಲದ ಹೊಟೇಲ್ ನಲ್ಲಿ ಜ್ಯೋತಿಷಿ ದೆವ್ವ ಓಡಿಸುವ ಪೂಜೆ ಮಾಡಿ, ಆತ್ಮವನ್ನು ಓಡಿಸುವ ನಾಟಕವಾಡಿದ್ದಾನೆ. ಪೂಜೆಯ ಬಳಿಕ ಆತ್ಮ ನಿಮ್ಮನ್ನು ಬಿಟ್ಟು ಹೋಗಿವೆ ಎಂದು ಹೇಳಿ ಮಹಿಳೆಯನ್ನು ಕಳುಹಿಸಿದ್ದಾನೆ.

ಆದರೆ, ದಿನ ಕಳೆದಂತೆ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಆರೋಗ್ಯ ಸುಧಾರಣೆ ಆಗದಿದ್ದ ವೇಳೆ ತಾನು ಮೋಸ ಹೋಗಿರುವುದಾಗಿ ಮಹಿಳೆ ಸತ್ಯ ಅರಿತುಕೊಂಡಿದ್ದಾರೆ. ಹೀಗಾಗಿ ತನ್ನ ಹಣ ಹಿಂದಿರುಗಿಸುವಂತೆ ಮಹಿಳೆ ಜ್ಯೋತಿಷಿ ಬಳಿಯಲ್ಲಿ ಕೇಳಲು ಸಂಪರ್ಕಿಸಲು ಯತ್ನಿಸಿದರೆ, ಆತ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾನೆ. ಸದ್ಯ ಮಹಿಳೆಯ ದೂರಿನಂತೆ ಜ್ಯೋತಿಷಿ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೂ, ಇಂತಹ ಆಧುನಿಕ ಯುಗದಲ್ಲೂ ಜ್ಯೋತಿಷ್ಯರು ಹೇಳಿದ ಮಾತುಗಳನ್ನು ನಂಬಿ ಸ್ವಂತಿಕೆ ಕಳೆದುಕೊಂಡು ಮೋಸ ಹೋಗುವವರು ಇರುವುದು ಅಚ್ಚರಿಯೇ ಸರಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version