4:44 AM Thursday 16 - October 2025

ಲೈಂಗಿಕ ಆಟಿಕೆ ಗೊಂಬೆಯನ್ನು ಮದುವೆಯಾಗಲು ಸಿದ್ಧನಾದ ಯುವಕ !

30/01/2021

ಹಾಂಕಾಂಗ್:  ಯುವಕನೋರ್ವ ಲೈಂಗಿಕ ಆಟಿಕೆ ಗೊಂಬೆಯನ್ನು ವಿವಾಹವಾಗಲು ಮುಂದಾಗಿದ್ದು, ಗೊಂಬೆಯ ಜೊತೆಗೆ ವಿವಾಹ ನಿಶ್ಚಿಯ ಮಾಡಿಕೊಂಡಿದ್ದಾನೆ. ತ್ಸೆ ಟೆನ್ ವಿಂಗ್ ಎಂಬ 36 ವರ್ಷದ ಯುವಕ ಗೊಂಬೆಯ ಜೊತೆಗೆ ವಿವಾಹವಾಗಲು ಹೊರಟ ಯುವಕನಾಗಿದ್ದಾನೆ.

ಇತ್ತೀಚೆಗಷ್ಟೇ ಬಾಡಿ ಬಿಲ್ಡರ್ ಒಬ್ಬ ಲೈಂಗಿಕ ಆಟಿಕೆ ಗೊಂಬೆಯನ್ನು ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದ. ಈತನ ಕೆಲಸಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಆದರೆ ಇದೀಗ ಇನ್ನೋರ್ವ ಯುವಕ ಲೈಂಗಿಕ ಆಟಿಕೆಯನ್ನು ವಿವಾಹವಾಗಲು ಮುಂದಾಗಿದ್ದಾನೆ.

ತ್ಸೆ ಟೆನ್ ವಿಂಗ್ 10 ವರ್ಷಗಳ ಹಿಂದೆ ಈ ಗೊಂಬೆಯ ಮೇಲೆ ಮೋಹಿತನಾಗಿದ್ದಾನೆ. ಆರಂಭದಲ್ಲಿ ಗೊಂಬೆಯ ಮೇಲೆ ವ್ಯಾಮೋಹ ಹೊಂದುವುದು ಸರಿಯಲ್ಲ ಎಂದು ಆತ ಅಂದುಕೊಂಡಿದ್ದ. ಆದರೆ, ಈ ಲೈಂಗಿಕ ಆಟಿಕೆ ಗೊಂಬೆಯ ಅಂದ ಯಾವ ಯುವತಿಯರಲ್ಲೂ ಕಾಣಲಿಲ್ಲ. ಈ ಕಾರಣಕ್ಕೆ ಈ ಗೊಂಬೆಯನ್ನು ತಾನು ವಿವಾಹವಾಗುತ್ತೇನೆ ಎಂದು ಆತ ಹೇಳಿದ್ದಾನೆ.

ಈ ಲೈಂಗಿಕ ಆಟಿಕೆಗೆ ಸುಮಾರು 9.8 ಲಕ್ಷ ರೂಪಾಯಿ ಬೆಲೆಯಿದ್ದು,  ಇದನ್ನು ಬಹಳ ಕಷ್ಟಪಟ್ಟು ಖರೀದಿಸಿರುವ ತ್ಸೆ ಟೆನ್ ವಿಂಗ್ ಅದಕ್ಕೆ ಮೋಚಿ ಎಂದು ಹೆಸರಿಟ್ಟಿದ್ದಾನೆ. ಸದ್ಯ ಮೋಚಿಯನ್ನು ವಿವಾಹವಾಗಲು ಆತ ಸಿದ್ಧತೆ ನಡೆಸುತ್ತಿದ್ದಾನೆ.

ಇತ್ತೀಚಿನ ಸುದ್ದಿ

Exit mobile version