ಪ್ರಿಯತಮೆಯನ್ನು ಅಪಹರಿಸಿ ಜೀವಂತ ಸಮಾಧಿ ಮಾಡಿದ್ದ ಪ್ರಿಯಕರ: ಬೆಚ್ಚಿ ಬೀಳಿಸಿದ ಕ್ರೂರಿಯ ಕ್ರೂರತನ..!

06/07/2023

ಭಾರತೀಯ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಆರೋಪಿ ಪ್ರಿಯಕರನನ್ನು ಆಸ್ಟ್ರೇಲಿಯಾ ನ್ಯಾಯಾಲಯವು ವಿಚಾರಣೆ ನಡೆಸಿತು.

2021ರ ಮಾರ್ಚ್‌ನಲ್ಲಿ 21 ವರ್ಷದ ಜಾಸ್ಮೀನ್ ಕೌರ್ ಎಂಬ ಯುವತಿಯನ್ನು ಆಕೆಯ ಮಾಜಿ ಪ್ರಿಯಕರ ತಾರಿಕ್‌ ಜೋತ್‌ ಸಿಂಗ್‌ ಅಪಹರಿಸಿ ಕೇಬಲ್‌ಗಳಿಂದ ಕಟ್ಟಿ ಗುಂಡಿ ತೋಡಿ ಆಕೆಯನ್ನು ಜೀವಂತ ಸಮಾಧಿ ಮಾಡಿದ್ದ.

ಸೇಡು ತೀರಿಸಲು ಆಕೆಯನ್ನು ಈ ರೀತಿ ಬರ್ಬರವಾಗಿ ಕೊಂದಿರುವುದಾಗಿ ಹಂತಕ ತನಿಖೆ ವೇಳೆ ಒಪ್ಪಿಕೊಂಡಿದ್ದ.

ಸಂತ್ರಸ್ತ ಯುವತಿ ಹಾಗೂ ಹಂತಕನ ನಡುವಿನ ಸಂಬಂಧದಲ್ಲಿ ಬಿರುಕು ಬಿದ್ದು ಯುವತಿ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಇದರಿಂದ ಮಾನಸಿಕ ಅಸ್ವಸ್ಥನಂತಾದ ಹಂತಕ ಆಕೆಯನ್ನು ಅಪಹರಿಸಿ ಕೊಂದಿದ್ದಾನೆ ಎಂದು ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ.

ಕೌರ್‌ ಳನ್ನು ಅಪಹರಿಸಿದ್ದ ಹಂತಕ, ಕಾರಲ್ಲಿ ಆಕೆಯನ್ನು ಹಾಕಿ 4 ಗಂಟೆಗಳ ಕಾಲ ಸಂಚರಿಸಿದ್ದ. ಆಕೆಯ ದೇಹವು ಕೈಕಾಲುಗಳನ್ನು ಕೇಬಲ್ ಟೈಗಳಿಂದ ಮತ್ತು ಗಫರ್ ಟೇಪ್‌ನಿಂದ ಬಂಧಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಣ್ಣಿನಡಿಯಲ್ಲಿ ಉಸಿರಾಡಲು ಸಾಧ್ಯವಾಗದೇ ಆಕೆ ಕೊಸರಾಡಿ ಮೃತಪಟ್ಟಿದ್ದಾಳೆ.

ಆಕೆಯ ಜೀವ ಹೋಗುವ ಕೊನೆ ಗಳಿಗೆಯು ಅತ್ಯಂತ ಅಮಾನುಷವಾಗಿತ್ತು ಎಂದು ಪ್ರಾಸಿಕ್ಯೂಟರ್‌ ಹೇಳಿದ್ದಾರೆ. ತನ್ನ ಮಗಳು ಆತನನ್ನು ನೂರು ಬಾರಿ ನಿರಾಕರಿಸಿದರೂ, ಅವಳ ವಿಷಯದಲ್ಲಿ ಆತ ಭ್ರಾಂತಿ ಹಿಡಿದಿದ್ದ ಎಂದು ಜಾಸ್ಮೀನ್ ಕೌರ್ ಳ ತಾಯಿ ರಶ್ಪಾಲ್ ಸಿಂಗ್ ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version