ಡಮಾಸ್ಕಸ್ ನಲ್ಲಿನ ಇರಾನ್ ದೂತಾವಾಸದ ಮೇಲೆ ಕಳೆದ ವಾರ ಇಸ್ರೇಲ್ ದಾಳಿ ನಡೆಸಿ ಇರಾನ್ ನ ಹಿರಿಯ ಸೇನಾಧಿಕಾರಿಯೊಬ್ಬರನ್ನು ಹತ್ಯೆಗೈದಿದೆ. ಇದ್ದಕ್ಕೆ ಪ್ರತೀಕಾರದ ದಾಳಿ ನಡೆಯಬಹುದು ಎಂದು ಅಮೆರಿಕ ಹಾಗೂ ಗುಪ್ತಚರ ಮೂಲಗಳು ಮುನ್ನೆಚ್ಚರಿಕೆ ನೀಡಿವೆ. ಈ ದಾಳಿಯು ಪೂರ್ಣಪ್ರಮಾಣದ ಪ್ರಾಂತೀಯ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇರಾನ್ ನಿಂದ...
ಇಸ್ರೇಲ್ ನ ವ್ಯಾಪಾರಿ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ. ಈಗಾಗಲೇ ಇರಾನ್ ಇಸ್ರೇಲ್ ನಡುವೆ ಯುದ್ಧ ಸಂಘರ್ಷ ಸ್ಥಿತಿ ಏರ್ಪಟ್ಟಿದ್ದು ಈ ವಶಪಡಿಸುವಿಕೆಯು ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಭಾವಿಸಲಾಗಿದೆ. ಇಸ್ರೇಲ್ ನ ವಿರುದ್ಧ ಆಕ್ರಮಣ ನಡೆಸುತ್ತೇವೆ ಎಂದು ಇರಾನ್ ಎಚ್ಚರಿಕೆ ಕೊಟ್ಟ ಬಳಿಕ ಈ ಘಟನೆ ನಡೆದಿದೆ. ಇದೇ ವೇಳೆ ...
ನೀವು ವಡೆ ಇಷ್ಟ ಪಡುತ್ತೀರೋ ಅಥವಾ ದೋಸೆ ಇಷ್ಟ ಪಡುತ್ತಿರೋ ಎಂಬುದು ಈ ದೇಶದ ಸಮಸ್ಯೆಯಲ್ಲ. ನೀವು ತಮಿಳುನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಇಷ್ಟಪಡುತ್ತೀರಾ ಎಂಬುದೇ ಬಹುಮುಖ್ಯ ಪ್ರಶ್ನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದ್ದಾರೆ. ಇಂಡಿಯಾ ಕೂಟದ ಈ ಮಹಾ ರ್ಯಾಲಿಯಲ್ಲಿ ಎಂಟು ಲ...
ಈ ಬಾರಿ 400 ಸೀಟ್ ಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರೂ ಪರಿಸ್ಥಿತಿಯೂ ಆ ರೀತಿ ಇಲ್ಲ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆ ಹೇಳಿದೆ. ಉತ್ತರ ಭಾರತದಲ್ಲಿ ಈ ಬಾರಿ ಬಿಜೆಪಿಗೆ ಪೂರಕ ವಾತಾವರಣ ಇಲ್ಲ ಮತ್ತು ವಿಪಕ್ಷಗಳಿಂದ ತೀವ್ರ ಪ್ರತಿರೋಧ ಎದುರಾಗಲಿದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆ ಹೇಳಿದೆ. ಹರಿಯಾ...
ಜೆಫ್ ಬೆಜೋಸ್ ಒಡೆತನದ ಬ್ಲೂ ಒರಿಜಿನ್ ನ ನ್ಯೂ ಶೆಫರ್ಡ್ -25 (ಎನ್ಎಸ್ -25) ಮಿಷನ್ನಲ್ಲಿ ಗೋಪಿ ತೋಟಕುರಾ ಅವರು ಬ್ರಹ್ಮಾಂಡಕ್ಕೆ ಹಾರಲು ತಯಾರಿ ನಡೆಸುತ್ತಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ ಮೂಲದ ಉದ್ಯಮಿ ಮತ್ತು ಪೈಲಟ್ ಗೋಪಿ ಅವರು ಇತರ ಐದು ಸಿಬ್ಬಂದಿಯೊಂದಿಗೆ ಆಕಾಶ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ. ಎನ್ಎಸ್ -25 ರ ಪ್ರತಿಯೊಬ್ಬ ಸ...
ವೇಗವಾಗಿ ಚಲಿಸುತ್ತಿದ್ದ ಕಾರು, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗ್ರೇಟರ್ ನೋಯ್ಡಾದ ಜನನಿಬಿಡ ಕ್ರಾಸಿಂಗ್ ಪಾರಿ ಚೌಕ್ ಬಳಿ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ. ಸುರೇಂದ್ರ ತನ್ನ ಸಹೋದರ...
ಸ್ಟಾರ್ ಪ್ರಚಾರಕರು ತಮ್ಮ ಪಕ್ಷದಿಂದ ಮಾತ್ರ ಇರಬಹುದು ಮತ್ತು ಇತರ ಪಕ್ಷಗಳ ನಾಯಕರು ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಬರೆದ ಪತ್ರದ ನಂತರ ಬಿಜೆಪಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ...
ಕೊಯಮತ್ತೂರಿಗೆ ಮೀಸಲಾಗಿದ್ದ ವ್ಯವಹಾರ ಹೂಡಿಕೆಯನ್ನು ಗುಜರಾತ್ ಗೆ ತಿರುಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಮುಖ್ಯ...
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು "ಅಯೋಧ್ಯೆಯ ರಾಮ ಮಂದಿರಕ್ಕೆ ಇನ್ನೂ ಭೇಟಿ ನೀಡಿಲ್ಲ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ಕಾಂಗ್ರೆಸ್ ಸಂಸದರು ಅದೇ ಗೌರವವನ್ನು ತೋರಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ,...
ಇಸ್ರೇಲ್ ನ ರಕ್ಷಣಾ ಸಚಿವಾಲಯದ ಮಾಹಿತಿಗಳನ್ನು ಹ್ಯಾಕ್ ಮಾಡಿರುವುದಾಗಿ ಸೈಬರ್ ಗ್ರೂಪ್ ಏನ್ ಇಟಿ ಹಂಟರ್ ಹೇಳಿದೆ. ಫೆಲೆಸ್ತೀನ್ನ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡದಿದ್ದರೆ ಈ ಮಾಹಿತಿಗಳನ್ನು ಜಾಗತಿಕವಾಗಿ ಮಾರಾಟಕ್ಕೆ ಇಡುವುದಾಗಿ ಹ್ಯಾಕರ್ ಗಳು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಇಸ್ರೇಲ್ ಗೆ ಇನ್ನೊಂದು ತಲೆನೋವು ಎದುರಾಗಿದೆ. ಟೆಲಿಗ...