ಇಸ್ರೇಲ್ ನ ರಕ್ಷಣಾ ಸಚಿವಾಲಯದ ಮಾಹಿತಿಗಳು ಹ್ಯಾಕ್: ಸೈಬರ್ ಗ್ರೂಪ್ ಏನ್ ಇಟಿ ಹಂಟರ್ ಹೇಳಿಕೆ - Mahanayaka

ಇಸ್ರೇಲ್ ನ ರಕ್ಷಣಾ ಸಚಿವಾಲಯದ ಮಾಹಿತಿಗಳು ಹ್ಯಾಕ್: ಸೈಬರ್ ಗ್ರೂಪ್ ಏನ್ ಇಟಿ ಹಂಟರ್ ಹೇಳಿಕೆ

12/04/2024

ಇಸ್ರೇಲ್ ನ ರಕ್ಷಣಾ ಸಚಿವಾಲಯದ ಮಾಹಿತಿಗಳನ್ನು ಹ್ಯಾಕ್ ಮಾಡಿರುವುದಾಗಿ ಸೈಬರ್ ಗ್ರೂಪ್ ಏನ್ ಇಟಿ ಹಂಟರ್ ಹೇಳಿದೆ. ಫೆಲೆಸ್ತೀನ್‌ನ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡದಿದ್ದರೆ ಈ ಮಾಹಿತಿಗಳನ್ನು ಜಾಗತಿಕವಾಗಿ ಮಾರಾಟಕ್ಕೆ ಇಡುವುದಾಗಿ ಹ್ಯಾಕರ್ ಗಳು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಇಸ್ರೇಲ್ ಗೆ ಇನ್ನೊಂದು ತಲೆನೋವು ಎದುರಾಗಿದೆ.

ಟೆಲಿಗ್ರಾಂ ಚಾನೆಲ್ ನಲ್ಲಿ ವಿಡಿಯೋದ ಮೂಲಕ ಹ್ಯಾಕರ್ ಗಳು ಈ ಮಾಹಿತಿಯನ್ನು ನೀಡಿದ್ದಾರೆ. ಮಾತ್ರ ಅಲ್ಲ ತಮ್ಮ ಕೈವಶವಿರುವ ಅಮೂಲ್ಯ ದಾಖಲೆಗಳ ಕೆಲವು ಭಾಗಗಳನ್ನು ಕೂಡ ಅದರಲ್ಲಿ ತೋರಿಸಿದ್ದಾರೆ.

ಗಾಝದಲ್ಲಿ ಇಸ್ರೇಲ್ 31 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿಯರನ್ನು ಹತ್ಯೆ ಮಾಡಿದೆ ಮತ್ತು ಅಸಂಖ್ಯ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದೆ ಎಂದು ಕೂಡ ಈ ವಿಡಿಯೋದಲ್ಲಿ ಹ್ಯಾಕರ್ ಗಳು ಹೇಳಿದ್ದಾರೆ. ಕನಿಷ್ಠ 500 ಫೆಲಸ್ತೀನಿ ಕೈದಿಗಳನ್ನಾದರೂ ಬಿಡುಗಡೆಗೊಳಿಸಲೇಬೇಕು. ಇಲ್ಲದಿದ್ದರೆ ನಮ್ಮ ಕೈವಶವಿರುವ ದಾಖಲೆಗಳನ್ನು ಜಗತ್ತಿನ ಮುಂದೆ ಇಡುತ್ತೇವೆ. ಜಗತ್ತಿಗೆ ಮಾನವ ಹಕ್ಕುಗಳ ಬಗ್ಗೆ ಪಾಠ ಮಾಡುವ ದೇಶಗಳ ಬಣ್ಣವನ್ನೂ ಈ ದಾಖಲೆಗಳು ಬಯಲುಗೊಳಿಸಲಿವೆ. ಇಸ್ರೇಲ್ಗೆ ನೆರವಾಗುತ್ತೇವೆ ಎಂದು ಒಪ್ಪಂದ ಮಾಡಿಕೊಂಡ ರಾಷ್ಟ್ರಗಳ ದಾಖಲೆಗಳು ಇದರಲ್ಲಿವೆ ಎಂದು ಹ್ಯಾಕರ್ ಗಳು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ