4 ದಿನಗಳ ‌ಮಧ್ಯೆ ಅಪಘಾತಕ್ಕೊಳಗಾದ ಇಸ್ರೇಲಿನ ಇಬ್ಬರು ಸಚಿವರು - Mahanayaka

4 ದಿನಗಳ ‌ಮಧ್ಯೆ ಅಪಘಾತಕ್ಕೊಳಗಾದ ಇಸ್ರೇಲಿನ ಇಬ್ಬರು ಸಚಿವರು

01/05/2024

ನಾಲ್ಕು ದಿನಗಳ ನಡುವೆ ಇಸ್ರೇಲಿನ ಇಬ್ಬರು ಸಚಿವರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ಏಪ್ರಿಲ್ 26ರಂದು ರಕ್ಷಣಾ ಸಚಿವ ಮತ್ತು ತೀವ್ರ ಬಲಪಂಥೀಯ ವ್ಯಕ್ತಿಯಾಗಿರುವ ಇತ್ತಾಮನ್ ಬೆನ್ ಗ್ವಿತಿನ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದರು. ಇದೀಗ ಯುದ್ಧಕ್ಕಾಗಿರುವ ಮಂತ್ರಿ ಮಂಡಲದ ಬೆನಿ ಗಾನ್ಸ್ ನಾನ್ ಅವರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.

ಬೆನ್ ಗಾನ್ಸ್ಟೆನ್ ಅವರ ಕಾರು ಬೈಕಿಗೆ ಗುದ್ದಿ ಪಲ್ಟಿ ಹೊಡೆದಿರುವುದಾಗಿ ವರದಿಯಾಗಿದೆ. ಮೊದಲು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿದ್ದು ಆ ಬಳಿಕ ಅವರನ್ನು ಶೇಬಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತಾಮನ್ ಅವರು ಸಂಚರಿಸುತ್ತಿದ್ದ ಕಾರು ಎಪ್ರಿಲ್ 26ರಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಟ್ರಾಫಿಕ್ ಸಿಗ್ನಲ್ ಅನ್ನು ಉಲ್ಲಂಘಿಸಿ ಸಂಚರಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಇತ್ತಾಮನ್ ಗೆ ಗಾಯಗಳಾಗಿದ್ದು ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೂಡ ಮಾಹಿತಿ ಇದೆ. ಇದೇ ವೇಳೆ ಎಪ್ರಿಲ್ 27ರಂದು ನಡೆದ ಇನ್ನೊಂದು ಅಪಘಾತದಲ್ಲಿ ಸಚಿವಹೈಮ್ ಬಿಟ್ಟ ಅವರ ತಂದೆಗೆ ಗಂಭೀರ ಗಾಯವಾಗಿದೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ