ವಯಸ್ಸು 64 ಆದರೂ ದೇಶ ಸುತ್ತಲು ಸೈಕಲ್ ಏರಿ ಬಿಟ್ಟರು | ಯಾರು ಛಲ ಬಿಡದ ಈ ನಾರಿ? - Mahanayaka

ವಯಸ್ಸು 64 ಆದರೂ ದೇಶ ಸುತ್ತಲು ಸೈಕಲ್ ಏರಿ ಬಿಟ್ಟರು | ಯಾರು ಛಲ ಬಿಡದ ಈ ನಾರಿ?

kamalesh rana
30/12/2022

  • ಶಂಶೀರ್ ಬುಡೋಳಿ, ಮಂಗಳೂರು

ಅವರ ವಯಸ್ಸು ಸುಮಾರು 64. ಅವರಿಗೆ ಸೈಕಲಲ್ಲೇ ದೇಶ ಸುತ್ತೋ ತವಕ‌. ಕೈಗೆ ಗಾಯ ಆದ್ರೂ ಛಲ ಬಿಡದ ಆ ನಾರಿ ದೇಶ ಸುತ್ತುವ ವೇಳೆ ಕಡಲನಗರಿಗೆ ಭೇಟಿ ಕೊಟ್ರು. ಅಂದ ಹಾಗೇ ಅವರು ಯಾರು..? ಅನ್ನೋದನ್ನು ತಿಳಿಯೋಣ ಬನ್ನಿ…

ಈ ಮಹಿಳೆಯ ಹೆಸರು ಕಮಲೇಶ್ ರಾಣಾ. ವಯಸ್ಸು 64.  ಹರಿಯಾಣದ ಸೈಕಲ್  ಸವಾರೆ. ರಾಷ್ಟ್ರೀಯ ಮಾಸ್ಟರ್ಸ್ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಅನೇಕ  ಚಿನ್ನದ ಪದಕ ವಿಜೇತೆಯಾಗಿರೋ ಕಮಲೇಶ್ ರಾಣಾರಿಗೆ ಇಬ್ಬರು ಮಕ್ಕಳು. ಮಗಳು LLM ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ. ಮಗ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಈ ನಡುವೆ ಸೈಕಲ್ ಮೂಲಕ ದೇಶ ಸುತ್ತುವ ಮೂಲಕ ದೈಹಿಕ ಕ್ಷಮತೆಯ ಸಂದೇಶ ನೀಡಲು ಏಕಾಂಗಿ ಸೈಕಲ್ ಪಯಣ ಮಾಡಲು ನಿರ್ಧಾರ ‌ಮಾಡಿದ್ರು.

ಭಾರತವನ್ನು ಮೇಲಿಂದ ಕೆಳಗಿನವರೆಗೆ ಸೈಕಲ್ ಮೂಲಕ ಸುತ್ತ ಬೇಕು ಎನ್ನುವ ಆಸೆಯಿಂದ ಸೆಪ್ಟೆಂಬರ್ 26 ರಿಂದ  ಶ್ರೀನಗರದದಿಂದ ಕನ್ಯಾಕುಮಾರಿಯಿಂದ ಸೈಕಲ್ ಯಾತ್ರೆ ಆರಂಭಿಸಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಶಾಮ್ಲಿಯ ಸಹ-ಸೈಕ್ಲಿಸ್ಟಿಕ್ ವಿಕಾಸ್ ಜೈ ಜಾನಿಯಾರು ಎಂಬುವವರ ಪರಿಚಯವಾಯಿತು. ಇವ್ರು ಕೂಡಾ ಹವಾಮಾನ ಬದಲಾವಣೆ, ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲು ಶ್ರೀ ನಗರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಹೊರಟ್ರು.

ದಿನವೊಂದಕ್ಕೆ ಸುಮಾರು 130ರಿಂದ 140 ಕಿ.ಮೀ ಸೈಕಲ್ ನಲ್ಲಿ ತಮ್ಮ ಬಟ್ಟೆ ಬರೆ, ಮಿತ ಆಹಾರ ದೊಂದಿಗೆ ಪಯಣಿಸುತ್ತಾರೆ.

ಭಾರತದ ಹರಿಯಾಣದ ರೋಹ್ಟಕ್ ನಿಂದ 2006 ರಿಂದ ರಾಷ್ಟ್ರೀಯ  ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟರ್ ಗಳಲ್ಲಿ ಹಲವು ಚಿನ್ನದ ಪದಕ ವಿಜೇತೆ. 2010 ರಲ್ಲಿ 1500 ಮೀಟರ್ ಓಟದಲ್ಲಿ ಮಲೇಶಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯ ನ್ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು.ಈ ಸಾಧನೆಗೆ ಸರಕಾರದಿಂದ ಯಾವುದೇ ಪ್ರೋತ್ಸಾಹ ದೊರೆತಿಲ್ಲ ಎನ್ನುವ ಕೊರಗು ಕಮಲೇಶ್ ರಾಣಾರಲ್ಲಿದೆ. 2010 ನಲ್ಲಿ ಕ್ಯಾಲಿಫೋರ್ನಿ ಯಾದಲ್ಲಿ ವಿಶ್ವ ಮಾಸ್ಟರ್ಸ್ ಚಾಂಪಿಯನ್ ಶಿಪ್ ಗೆ  ಆಯ್ಕೆಯಾಗಿದ್ದರು. ಇವರು  ಶ್ರೀನಗರದಿಂದ ಕನ್ಯಾಕುಮಾರಿಗೆ  ಸೈಕಲ್ ನಲ್ಲಿ ಹೊರಟಿದ್ದರು.

ಸೈಕಲ್ ಮೂಲಕ ದೇಶ ಸುತ್ತಲೂ ಹೊರಟ ಅವರು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದಾಗ ಕುಳಾಯಿ ಬಳಿ ಬಸ್  ಇವರ ಸೈಕಲ್ ಗೆ ಡಿಕ್ಕಿ ಹೊಡೆಯಿತು.  ಇದರಿಂದ ಅವರ ಕೈ ಮುರಿಯಿತು.  ಕೈಗೆ ಬಲವಾದ ಏಟು ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು‌ ಅಪಘಾತದ ಕಾರಣದಿಂದಾಗಿ ಶ್ರೀ ನಗರದಿಂದ ಕನ್ಯಾಕುಮಾರಿವರೆಗೆ  ಕ್ರಮಿಸುವ ಗುರಿಯಿಂದ ತಾನು ವಿಚಲಿತಳಾಗಿಲ್ಲ ಎಂದು ಕಮಲೇಶ್ ರಾಣಾ ಸ್ಪಷ್ಟಪಡಿಸಿದ್ದಾರೆ.

ಸೈಕಲ್ ತುಳಿಯುವುದರಿಂದ ಮತ್ತು ನಿರಂತರ ವ್ಯಾಯಾಮ, ಯೋಗ ಮಾಡುವುದರಿಂದ ಮಧುಮೇಹದಿಂದ ದೂರ ಇರಬಹುದು.  ಸೈಕಲ್ ತುಳಿಯಲು ಆರಂಭಿಸಿದ ನಂತರ ಈ ಕಾಯಿಲೆಯಿಂದ ಮುಕ್ತಳಾಗಿದ್ದೇನೆ ಎಂಬುದು ಕಮಲೇಶ್ ರಾಣಾರ ಮಾತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ