ಕಿಲ್ಲರ್: ವಿಷ ಹಾಕಿ ಪತಿಯನ್ನೇ ಕೊಂದ ಪತ್ನಿ..!
ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಗೆ ವಿಷ ನೀಡಿ ಕೊಂದಿದ್ದಾಳೆ. ಹಿಂದೂ ಹಬ್ಬವಾದ ಕರ್ವಾ ಚೌತ್ ನ ಶುಭ ದಿನದಂದು ಈ ಘಟನೆ ನಡೆದಿದೆ. ವಿಪರ್ಯಾಸ ಅಂದ್ರೆ ಈ ಸಂದರ್ಭದಲ್ಲಿ ಪತ್ನಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಕರ್ವಾ ಚೌತ್ ಹಬ್ಬದ ಸಂದರ್ಭದಲ್ಲಿ ಸಿದ್ಧಪಡಿಸಿದ ಊಟವನ್ನು ಸೇವಿಸಿದ ನಂತರ ಸಂತ್ರಸ್ತ ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು ಎಂದು ಸಿರತು ಸರ್ಕಲ್ ಆಫೀಸರ್ ಅವಧೇಶ್ ಕುಮಾರ್ ವಿಶ್ವಕರ್ಮ ತಿಳಿಸಿದ್ದಾರೆ.
ಮೃತನನ್ನು ಉತ್ತರ ಪ್ರದೇಶದ ಕಾಡಾ ಧಾಮ್ ಪ್ರದೇಶದ ಇಸ್ಮಾಯಿಲ್ಪುರ ಗ್ರಾಮದ ನಿವಾಸಿ ಶೈಲೇಶ್ (32) ಎಂದು ಗುರುತಿಸಲಾಗಿದೆ.
ಅವರನ್ನು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಶೈಲೇಶ್ ಅವರ ಪತ್ನಿ ಸವಿತಾ (30) ಆಹಾರದಲ್ಲಿ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿ ಶೈಲೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಕೊಲೆಗೆ ಕಾರಣವಲ್ಲದ ನರಹತ್ಯೆ) ಮತ್ತು 123 (ವಿಷಪ್ರಾಶನ) ಅಡಿಯಲ್ಲಿ ಸವಿತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಒ ತಿಳಿಸಿದ್ದಾರೆ.
ಆರೋಪಿ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth