ಹೆಣ್ಣು ಹೊರೆಯು ಅಲ್ಲ ಗಂಡು ದೊರೆಯು ಅಲ್ಲ - Mahanayaka

ಹೆಣ್ಣು ಹೊರೆಯು ಅಲ್ಲ ಗಂಡು ದೊರೆಯು ಅಲ್ಲ

women
06/03/2023

  • ಚಂದ್ರಕಾಂತ ಹಿರೇಮಠ, ಬೆಂಗಳೂರು

ಹೆಣ್ಣು ಹೊರೆಯು ಅಲ್ಲ ಗಂಡು ದೊರೆಯು ಅಲ್ಲ, ಇದು ಕೇಳಲು ಮತ್ತು ಹೇಳಲು ಅಷ್ಟೇ ಸೀಮಿತವಲ್ಲ ಈ ರೀತಿ ಬಾಳಿದರೆ ಜೀವನ ತುಂಬಾ ಮಧುರ. ಎಂದು ಹೇಳುತ್ತಾ ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.


Provided by

ಮಹಿಳೆಯು ತಂದೆಗೆ ಮಗಳಾಗಿ, ಗಂಡನ ಬೆಳವಣಿಗೆಗಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ತಾಯಿಯಾಗಿ, ಸಾಧನೆಗೆ ಸ್ಫೂರ್ತಿಯಾಗಿ, ಮನೆಗೆ ಬೆಳಗುವ ಬೆಳಕಾಗಿ, ಮಗಳಾಗಿ,ಸಹೋದರಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಪ್ರತಿಯೊಂದು ಘಟ್ಟದಲ್ಲಿಯೂ ಕೂಡ ತನ್ನದೇ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ  ನಿಭಾಯಿಸುತ್ತಾಳೆ, ಪುರಾತನ ಕಾಲದಿಂದಲೂ ಮಹಿಳೆಗೆ ವಿಶೇಷ ಸ್ಥಾನಮಾನ ಇರುವುದನ್ನು ನಾವು ಕಾಣುತ್ತೇವೆ,ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ.ಮಹಿಳೆ ಅಂದಾಗ ನೆನಪು ಬರುವುದು ನಮ್ಮ ಮನೆಗಳಲ್ಲಿ ಏನು ಅಪೇಕ್ಷೆ ಮಾಡದೆ ಕೆಲಸ ಮಾಡುವ ಅಮ್ಮಂದಿರು ಹಲವಾರು ಸಮಸ್ಯೆಗಳನ್ನ ಮೆಟ್ಟಿನಿಂತು ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ.

1975 ಮಾರ್ಚ್ 8 ರಂದು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು, ಅಂತರರಾಷ್ಟ್ರೀಯ ಮಹಿಳಾ ದಿನ ಮಹಿಳೆಯರ ಸಾಧನೆಗಳನ್ನು ನೆನೆಯುವ ದಿನ. ತನಗಿರುವ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದಿದ್ದಾಳೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆ ಮಹತ್ತರ ಸಾಧನೆ ಮಾಡಿದ್ದಾಳೆ. ಯಾವ ಪುರುಷರಿಗೂ ತಾನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಅದರಲ್ಲಿ ಮೊದಲಿಗರಾಗಿ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್, ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ, ಬಾಹ್ಯಕಾಶದಲ್ಲಿ ಸಾಧನೆ ಮಾಡಿದ ಕಲ್ಪನಾ ಚಾವ್ಲಾ, ಮೌಂಟ್ ಎವರೆಸ್ಟ್ ಏರಿದ ಬಚೇಂದ್ರಿ ಪಾಲ್ , ಒಲಂಪಿಕ್ಸ್ ನಲ್ಲಿ ಮೊದಲ ಭಾರತೀಯರಾದ ಕರ್ಣಂ ಮಲ್ಲೇಶ್ವರಿ, ಒಲಂಪಿಕ್ಸ್ ನಲ್ಲಿ ಮೊದಲ ಬೆಳ್ಳಿ ಗೆದ್ದ ಪಿವಿ ಸಿಂಧು, ಮೊದಲ ವಿಶ್ವ ಸುಂದರಿ ರೀಟಾ ಫರಿಯಾ, ಮೊದಲ ಭವನ ಸುಂದರಿ ಸುಶ್ಮಿತಾ ಸೇನ್ , ಮಹಿಳಾ ಐಪಿಎಸ್ ಕಿರಣ್ ಬೇಡಿ, ಕ್ರಿಕೆಟ್ ದಲ್ಲಿ ದ್ವಿಶತಕ ಸಾಧಿಸಿದ ಮಿಥಾಲಿ ರಾಜ್, ಇವರೆಲ್ಲರೂ ನಮಗೆ ಸ್ಪೂರ್ತಿ.

ಸರ್ಕಾರವು ಕೂಡ ಮಹಿಳೆಯರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ಮಹತ್ತರ ಉದ್ದೇಶದಿಂದ ಜನವರಿ 22, 2015ರಂದು ಹರ್ಯಾಣದ ಪಾಣಿಪತ್‌ನಲ್ಲಿ ಈ ಯೋಜನೆಯನ್ನು ತರಲಾಯಿತು. ಈ ಯೋಜನೆಯು ವನ್ನು ಹೊಂದಿದೆ. ಮೊದಮೊಲಿಗೆ ಪುರುಷ-ಸ್ತ್ರೀ ಅನುಪಾತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಅನಂತರದಲ್ಲಿ ಹೆಣ್ಣು ಭ್ರೂಣ ಹತ್ಯೆ, ತಾರತಮ್ಯ ಆಧಾರಿತ ಶಿಕ್ಷಣ, ಲಿಂಗಾಧರಿತ ಅಬಾರ್ಷನ್‌ ಮುಂತಾದವುಗಳ ವಿರುದ್ಧ ಜಾಗೃತ ಮೂಡಿಸಲು ಬಳಸಲಾಲಾತು.

ಮಹಿಳಾ ಇ–ಹಟ್‌: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2016ರಲ್ಲಿ ಈ ಯೋಜನೆಯನ್ನು ಜಾರಿ ಮಾಡಿತು. ಮಹಿಳಾ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಆನ್‌ಲೈನ್‌ನಲ್ಲಿ ಮಾರುಕಟ್ಟೆಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಮೂಲಕ ಮಾರಾಟಗಾರರು, ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳಾ ಉದ್ಯಮಿಯೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮಧ್ಯವರ್ತಿಗಳ ಸಹಾಯ ಇಲ್ಲದೆ ಮೊಬೈಲ್‌ ಮೂಲಕವೇ ಈ ಯೋಜನೆಯ ಲಾಭ ಪಡೆಯಬಹುದು.ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಡಿಜಿಟಲ್‌ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಂತೆ ಅರಿವು ಮೂಡಿಸುವುದು ಇದರ ಉದ್ದೇಶ.

ವರ್ಕಿಂಗ್‌ ವುಮನ್‌ ಹಾಸ್ಟೆಲ್‌ ಉದ್ಯೋಗಸ್ಥ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಮತ್ತು ಸೂಕ್ತ, ವ್ಯವಸ್ಥಿತಿ ವಸತಿ ಒದಗಿಸುವ ದೃಷ್ಟಿಯಿಂದ ಜಾರಿಗೆ ತರಲಾದ ಯೋಜನೆ ಇದು. ಮಕ್ಕಳಿಗೆ ಡೇ ಕೇರ್‌ ವ್ಯವಸ್ಥೆಯನ್ನೂ ಒಳಗೊಂಡಿದ್ದು, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಈ ಸೌಲಭ್ಯವಿದೆ.

ಸುಕನ್ಯಾ ಸಮೃದ್ಧಿ ಯೋಜನೆ: ಸುಕನ್ಯಾ ಸಮೃದ್ಧಿ ಯೋಜನೆಯು ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಯೋಜನೆ. ಬಡ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡುವ ಯೋಜನೆಯಾಗಿದೆ. ಹೆಣ್ಣು ಮಗು ಜನಿಸಿದ ನಂತರ 10 ವರ್ಷದ ಒಳಗಾಗಿ ಯಾವುದೇ ಪೋಸ್ಟ್ ಆಫೀಸ್‌ ಅಥಅಥವಾ ಬ್ಯಾಂಕ್‌ ನಲ್ಲಿ ಖಾತೆ ತೆರೆಯಬಹುದು.

ನಾರಿ ಶಕ್ತಿ ಪುರಸ್ಕಾರ: 1999ರಲ್ಲಿ ಜಾರಿಗೆ ತರಲಾದ ಈ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಶಾಶ್ವತ ಕೊಡುಗೆ ನೀಡುವ, ದುಡಿಯುವ ಹೆಣ್ಣು ಮಕ್ಕಳನ್ನು ಗುರುತಿಸಿ ನೀಡುವ ಪುರಸ್ಕಾರವಾಗಿದೆ. ಇದು ಭಾರತದಲ್ಲಿ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದು. ಪ್ರತಿ ವರ್ಷ ಮಾಚ್‌ರ್‍ 8 ರಂದು ಅರ್ಹ ಸಾಧಕಿಯರಿಗೆ ದೇಶದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿ ಪತ್ರ ಮತ್ತು  ನಗದನ್ನು ಒಳಗೊಂಡಿರುತ್ತದೆ.

ಒನ್‌ ಸ್ಟಾಪ್‌ ಸೆಂಟರ್‌ ಯೋಜನೆ: ಖಾಸಗಿ ಅಥವಾ ಸಾರ್ವಜನಿಕ ವಲಯಗಳಲ್ಲಿ ದೌರ್ಜನ್ಯ ಎದುರಿಸುವ ಮಹಿಳೆಯರಿಗೆ ಒಂದೇ ಸೂರಿನಡಿ ಬೆಂಬಲ ಮತ್ತು ನೆರವು ನೀಡುವ ಯೋಜನೆ ಇದು. ಮಹಿಳೆಯರ ಮೇಲಿನ ಯಾವುದೇ ರೀತಿಯ ಹಿಂಸಾಚಾರದ ವಿರುದ್ಧ ಹೋರಾಡಲು ನೊಂದ ಹೆಣ್ಣುಮಕ್ಕಳಿಗೆ ವೈದ್ಯಕೀಯ, ಕಾನೂನು ಬೆಂಬಲ ಮತ್ತು ಸಮಾಲೋಚನೆಯಂಥ ತುರ್ತು ನೆರವನ್ನು ನೀಡಲಾಗುತ್ತದೆ. ನಿರ್ಭಯಾ ಫಂಡ್‌ ಮೂಲಕ ಈ ಯೋಜನೆಗೆ ಹಣ ಒದಗಿಸಲಾಗುತ್ತಿದೆ.

ಸ್ವಾಧಾರ್‌ ಗ್ರಹ ಸ್ಕೀಮ್: ಕೌಟುಂಬಿಕ ಸಮಸ್ಯೆ, ಅಪರಾಧ, ಹಿಂಸೆ, ಮಾನಸಿಕ ಒತ್ತಡ, ಸಾಮಾಜಿಕ ಬಹಿಷ್ಕಾರ ಮುಂತಾದ ಸಂದರ್ಭಗಳಲ್ಲಿ ಮಹಿಳೆಯರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದೇ ರೀತಿ ಉದ್ದೇಶವನ್ನು ಹೊಂದಿರುವ ಇನ್ನೊಂದು ಯೋಜನೆ ಶಾರ್ಟ್‌ ಸ್ಟೇ ಹೋಂ (ಎಎಸ್‌ಎಸ್‌ಎಚ್‌). ನಿರ್ಗತಿಕರಾದ ಮಹಿಳೆಯರಿಗೆ ಪ್ರಾಥಮಿಕವಾಗಿ ಆಹಾರ, ವಸತಿ, ಬಟ್ಟೆ, ಮೆಡಿಕಲ್‌ ಟ್ರೀಟ್‌ಮೆಂಟ್‌ ಒದಗಿಸಲಾಗುತ್ತದೆ. ಕುಟುಂಬ ಅಥವಾ ಸಮಾಜದಲ್ಲಿ ಅವರ ಮರು ಹೊಂದಾಣಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಅಪರಾಧ ಮುಕ್ತವಾಗಿ ಘನತೆಯಿಂದ ಬಾಳಲು ಈ ಯೋಜನೆ ಅನುವು ಮಾಡಿಕೊಡುತ್ತದೆ.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ: ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆಯುಕ್ತ ಅಡುಗೆಮನೆಯಿಂದ ಮುಕ್ತಿ ನೀಡಿ, ಶುದ್ಧ ಇಂಧನವನ್ನು ಒದಗಿಸುವ ಮಹತ್ತರ ಉದ್ದೇಶದಿಂದ 2016ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಳೆಯುಳಿಕೆ ಇಂಧನಗಳು ಮತ್ತು ಇತರ ಇಂಧನಗಳನ್ನು ಅಡುಗೆಗಾಗಿ ಬಳಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿಗ್ರಹಿಸುವುದು, ಅಡುಗೆಗೆ ಬಳಸುವ ಅಶುದ್ಧ ಇಂಧನಗಳ ಪರಿಣಾಮವಾಗಿ ಸಂಭವಿಸುವ ಸಾವುನೋವುಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.

ಸ್ಟೆಪ್‌ (ಎಸ್‌ಟಿಇಪಿ): ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತಯೋಜನೆಯನ್ನು(ಸ್ಟೆಪ್‌) ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ 1986ರಲ್ಲಿ ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.

ಸಮಾನ ವೇತನದ ಹಕ್ಕು: ಸಂಬಳದ ಅಸಮಾನತೆಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮಸ್ಯೆಯಾಗಿದೆ. ಆದರೆ, ಭಾರತದಲ್ಲಿ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು  (Equal Remuneration Act, 1976) ಖಾತ್ರಿಪಡಿಸುವ ಕಾನೂನನ್ನು ನಾವು ಹೊಂದಿದ್ದೇವೆ. ಸಮಾನ ಸಂಭಾವನೆ ಕಾಯಿದೆ 1976 ರ ಅಡಿಯಲ್ಲಿ, ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕಿದೆ.

ವಿಚ್ಛೇದನಕ್ಕೆ ಸಂಬಂಧಿಸಿದ ಈ ಕಾನೂನು:   ಈ ಕಾನೂನಿನ ಬಗ್ಗೆ ಎಲ್ಲಾ ಮಹಿಳೆಯರು ತಿಳಿದಿರಬೇಕು. ವಿಶೇಷವಾಗಿ ನೀವು ವಿವಾಹಿತರಾಗಿದ್ದರೆ, ನೀವು ಈ ಕಾನೂನಿನ ಬಗ್ಗೆ ತಿಳಿದಿರಬೇಕು. ವೈವಾಹಿಕ ಅತ್ಯಾಚಾರ ಮತ್ತು ಸಂವಹನ STD ಗಳು ಈ ಕಾನೂನಿನ ಅಡಿಯಲ್ಲಿ ವಿಚ್ಛೇದನಕ್ಕೆ ಆಧಾರವಾಗಬಹುದು. ಮದುವೆಯ ನಂತರ ಒಪ್ಪಿಗೆಯಿಲ್ಲದೆ ದೈಹಿಕ ಸಂಬಂಧ ಹೊಂದುವುದು ವಿಚ್ಛೇದನಕ್ಕೆ ಕಾರಣವಾಗಬಹುದು.

ಗರ್ಭಪಾತ ಮಾಡಿಸುವ ಹಕ್ಕು: ಗರ್ಭಿಣಿಯಾಗಿರುವ ಕಾರಣ ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯವು ಹದಗೆಡುತ್ತಿದ್ದರೆ, ಮಹಿಳೆಗೆ ಕಾನೂನುಬದ್ಧವಾಗಿ ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತ ಮಾಡುವ ಹಕ್ಕಿದೆ.

ಕೌಟುಂಬಿಕ ಹಿಂಸೆಯ ವಿರುದ್ಧ ಹಕ್ಕು:  2005 ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯ ಆಧಾರದ ಮೇಲೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಹಕ್ಕು  (Right against domestic violence) ಪ್ರತಿಯೊಬ್ಬ ಮಹಿಳೆಗೂ ಇದೆ. ಕೌಟುಂಬಿಕ ಹಿಂಸಾಚಾರವು ದೈಹಿಕ ಕಿರುಕುಳವನ್ನು ಮಾತ್ರವಲ್ಲದೆ ಮಾನಸಿಕ, ಲೈಂಗಿಕ ಮತ್ತು ಆರ್ಥಿಕ ದುರುಪಯೋಗವನ್ನು ಒಳಗೊಂಡಿರುತ್ತದೆ.

ಸಾಂತ್ವನ ಮಹಿಳಾ ಸಹಾಯವಾಣಿ: ಈ ಯೋಜನೆಯನ್ನು 2001ರಲ್ಲಿ ಜಾರಿಗೆ ಗೊಳಿಸಲಾಯಿತು ಅತ್ಯಾಚಾರ ಕೌಟುಂಬಿಕ ಹಿಂಸೆ ವರದಕ್ಷಣೆ ಲೈಂಗಿಕ ಹಿಂಸೆ ಮುಂತಾದ ಸಮಸ್ಯೆಗಳಿಗೆ ಒಳಗಾದ ಮಹಿಳೆಯರಿಗೆ ಪುನರ್ವಸತಿ ಒದಗಿಸುವುದು, ಉದ್ಯೋಗಿನಿ ಯೋಜನೆ ಈ ಯೋಜನೆಯನ್ನು 2010ರಲ್ಲಿ ಜಾರಿಗೊಳಿಸಲಾಯಿತು, ಮಹಿಳೆಯರನ್ನು ಸ್ವಉದ್ಯೋಗಿಗಳನ್ನಾಗಿ ಮಾಡುವುದು ಈ ಯೋಜನೆ ಪ್ರಮುಖ ಉದ್ದೇಶ, ಕಿಶೋರಿ ಯೋಜನೆ ಈ ಯೋಜನೆ ಅಡಿ 18 ವರ್ಷದ ಬಾಲಕಿಯರಿಗೆ ಐದು ದಿನಗಳ ವಸತಿಯುತ ತರಬೇತಿಯನ್ನು ನೀಡಲಾಗುತ್ತದೆ.

ಬಾಲ ಸಂಜೀವಿನಿ: ಈ ಯೋಜನೆ ಅಡಿ ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ ಮತ್ತು ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಮನಸ್ವಿನಿ ಯೋಜನೆ: ಈ ಯೋಜನೆಯನ್ನು 2013ರಲ್ಲಿ ಜಾರಿಗೊಳಿಸಲಾಯಿತು ಇದರಲ್ಲಿ ಅವಿವಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ತಿಂಗಳಿಗೆ ಮಾಶಾಸನ ನೀಡಲಾಗುತ್ತದೆ.

ಮೈತ್ರಿ ಯೋಜನೆ: ಇದನ್ನು 2013ರಲ್ಲಿ ಜಾರಿಗೊಳಿಸಲಾಯಿತು, ಲೈಂಗಿಕ ಅಲ್ಪಸಂಖ್ಯಾತರಿಗೆ ಆರ್ಥಿಕ ನೆರವನ್ನು ನೀಡಲಾಗುವುದು.

ಶಾದಿಭಾಗ್ಯ ಯೋಜನೆ: 2013ರಲ್ಲಿ ಈ ಯೋಜನೆ ಜಾರಿಗೊಳಿಸಲಾಯಿತು, ಬಡವರ್ಗದ ಅಲ್ಪಸಂಖ್ಯಾತ ಮಹಿಳೆಯರ ವ್ಯವಹಾರಕ್ಕೆ ಧನ ಸಹಾಯ ಮಾಡುವುದು.

ಮಡಿಲು ಯೋಜನೆ: ಈ ಯೋಜನೆಯನ್ನು 2007 ರಲ್ಲಿ ಜಾರಿಗೊಳಿಸಲಾಯಿತು, ಬಡತನ ರೇಖೆ ಕೆಳಗಿರುವಂತಹ ಕುಟುಂಬಗಳಿಗೆ ಸೇರಿದ ಮಹಿಳೆಯರು ಹೆರಿಗೆ ಮಾಡಿಸಿಕೊಂಡರೆ ಉಚಿತವಾಗಿ ಸಾಮಗ್ರಿಗಳನ್ನು ನೀಡುವುದು.ಜನನಿ ಸುರಕ್ಷಾ ಯೋಜನೆ ಈ ಯೋಜನೆಯನ್ನು 2005ರಲ್ಲಿ ಜಾರಿಗೆಗೊಳಿಸಲಾಯಿತು.

ತಾಯಿ ಭಾಗ್ಯ ಯೋಜನೆ:  ಈ ಯೋಜನೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಹೆರಿಗೆಯ ಸಂದರ್ಭದಲ್ಲಿ ನೀಡಲಾಗುತ್ತದೆ.

ಆರೋಗ್ಯ ಕವಚ: ಯೋಜನೆಯನ್ನು 2008ರಲ್ಲಿ ಜಾರಿಗೊಳಿಸಲಾಯಿತು, ಈ ಯೋಜನೆ ಅಡಿ ಉಚಿತ ಅಂಬುಲೆನ್ಸ್ ಸೇವೆಯನ್ನು ನೀಡಲಾಗುತ್ತದೆ.

ಪ್ರಸೂತಿ ಆರೈಕೆ ಯೋಜನೆ: ಈ ಯೋಜನೆಯನ್ನು 2006ರಲ್ಲಿ ಜಾರಿಗೊಳಿಸಲಾಯಿತು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬಡತನ ರೇಖೆಗೆ ಇಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದು.

ಮಾನಸಧಾರ: ಇದನ್ನು 2014ರಲ್ಲಿ ಜಾರಿಗೊಳಿಸಲಾಯಿತು, ಈ ಯೋಜನೆ ಅಡಿ ಮನೋರೋಗಿಗಳಿಗೆ ಚಿಕಿತ್ಸೆ ಮತ್ತು ಆರ್ಥಿಕ ನೆರವನ್ನು ನೀಡುವುದರ ಜೊತೆಗೆ ಅವರಿಗೆ ಆಶ್ರಯ ನೀಡಲಾಗುತ್ತದೆ.

ಕರ್ನಾಟಕ ಕಾಯಕ ಯೋಜನೆ: ಮಿಷನ್ ಪೋಷಣ ಮಿಷನ್ ವಾತ್ಸಲ್ಯ ಅಭಿವೃದ್ಧಿ ಯೋಜನೆ ಪ್ರಧಾನ ಮಂತ್ರಿ ಮಹಿಳಾ ಸ ಶಕ್ತಿಕರಣ ಈ ರೀತಿಯಾದ ಹಲವಾರು ಯೋಜನೆಗಳನ್ನು ಕಾಯ್ದೆಗಳನ್ನು ಸರ್ಕಾರ ಜಾರಿಗೆ ತರುತ್ತದೆ

ಆದರೆ ಒಂದು ವಿಪರ್ಯಾಸದ ಸಂಗತಿ ಎಂದರೆ ಕೆಲವು ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆಯು ಹೆಚ್ಚುತ್ತಿದೆ, ಇವುಗಳು ಪುರುಷರಿಗೆ ಸಿಂಹ ಸ್ವಪ್ನವಾಗದಿರಲಿ. ಹೆಣ್ಣು ಹೊರೆಯು ಅಲ್ಲ ಗಂಡು ದೊರೆಯು ಅಲ್ಲ, ಇಬ್ಬರ ಸಹಮತ ಜೀವನವೇ ಚೆಂದ.ನೀವು ಪುರುಷರಾಗಿದ್ದಲ್ಲಿ ಪ್ರತಿಯೊಂದು ಹೆಣ್ಣನ್ನು ಗೌರವಿಸಿ, ನೀವು ಮಹಿಳೆಯಾಗಿದ್ದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆಪಡಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ