ನಟ ದರ್ಶನ್ ಗೆ ಭಾರೀ ನಿರಾಸೆ: ಮನೆಯೂಟ ನೀಡಲು ಸಾಧ್ಯವಿಲ್ಲ ಎಂದ ಕೋರ್ಟ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಮನೆಯೂಟಕ್ಕೆ ಅನುಮತಿ ನೀಡುವಂತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು (ಜುಲೈ 25) ಅರ್ಜಿ ವಿಚಾರಣೆ ನಡೆಸಿದೆ.
ನಟ ದರ್ಶನ್ ಆರೋಗ್ಯ ತಪಾಸಣೆ ವರದಿ ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಹಿಂದೆಯೇ ಕೇಳಿತ್ತು. ಇಂದು ದರ್ಶನ್ ಹೆಲ್ತ್ ರಿಪೋರ್ಟ್ ಅನ್ನು ಮೇಲ್ ಮಾಡಲಾಗಿದೆ. ದರ್ಶನ್ ತೂಕ ಇಳಿಕೆ ಆಗಿದೆ. ಆದ್ರೆ ಯಾವುದೇ ರೀತಿಯ ಫುಡ್ ಪಾಯಿಸನ್ ಆಗಿಲ್ಲ ಎನ್ನಲಾಗ್ತಿದೆ. ಅತಿಸಾರ, ಭೇದಿಯಂತಹ ಸಮಸ್ಯೆ ಕೂಡ ನಟ ದರ್ಶನ್ ಅವರಿಗೆ ಇರಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ನಟ ದರ್ಶನ್ ಹೆಲ್ತ್ ರಿಪೋರ್ಟ್ ಸೇರಿದಂತೆ ಇಬ್ಬರು ವಕೀಲರ ವಾದ ಆಲಿದ 24ನೇ ಎಸಿಎಂಎಂ ನ್ಯಾಯಾಲಯ ನಟ ದರ್ಶನ್ ಗೆ ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ.
ಹಲವು ದಿನಗಳಿಂದಲೂ ಮನೆಯೂಟಕ್ಕಾಗಿ ನಟ ದರ್ಶನ್ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೋರ್ಟ್ ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ ದರ್ಶನ್ ಗೆ ನಿರಾಸೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: