ಮುಳುಗಿದ ಹೆಬ್ಬಾಳೆ ಸೇತುವೆಯಲ್ಲಿ ಜೀಪ್ ಚಲಾಯಿಸಿದ ಚಾಲಕ: ಮುಂದೇನಾಯ್ತು ನೀವೇ ನೋಡಿ..!
ಚಿಕ್ಕಮಗಳೂರು: ಹೆಬ್ಬಾಳೆ ಸೇತುವೆ ಮೇಲೆ ಎರಡು ಅಡಿ ಎತ್ತರಕ್ಕೆ ನೀರು ಹರಿಯುತ್ತಿದ್ದು, ಅಪಾಯದ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ಆದರೆ ಜೀಪ್ ಚಾಲಕನೋರ್ವ ಬ್ಯಾರಿಕೇಡ್ ದಾಟಿ ರಸ್ತೆ ದಾಟಲು ಯತ್ನಿಸಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದರೂ ಜೀಪ್ ಚಾಲಕ ಡೋಂಟ್ ಕೇರ್ ಮಾಡಿ ಪೊಲೀಸ್ ಬ್ಯಾರಿಕೇಡ್ ದಾಟಿ ಮುಂದೆ ಪ್ರಯಾಣಿಸಿದ್ದಾನೆ. ಸೇತುವೆಯಲ್ಲಿ ಜೀಪ್ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ನೀರಿನ ರಭಸಕ್ಕೆ ಸಿಲುಕಿ ನದಿಯತ್ತ ಜೀಪ್ ನ್ನು ಸೆಳೆದಿದೆ.
ಜೀಪ್ ಚಾಲಕನ ಹುಚ್ಚಾಟವನ್ನು ನೋಡುತ್ತಿದ್ದ ಸ್ಥಳೀಯರು ಜೀಪ್ ಹೋಯ್ತು, ನದಿಯಲ್ಲಿ ಹೋಯ್ತು ಎಂದು ಆತಂಕದಲ್ಲಿ ಕಿರುಚಾಡಿದ್ದಾರೆ. ಆದರೆ ಜೀಪ್ ಸೇತುವೆ ಅಂಚಿನಲ್ಲಿ ಸ್ವಲ್ಪ ಅಂತರದಲ್ಲೇ ಸೇತುವೆ ದಾಟಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾನೆ.
ಪಶ್ವಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆ ಹೆಬ್ಬಾಳೆ ಸೇತುತೆ ಮುಳುಗಡೆಯಾಗಿದೆ. ಸೇತುವೆ ಮುಳುಗಿದ್ದು, ಅಪಾಯಕಾರಿ ಸನ್ನಿವೇಶ ಇದೆ ಎನ್ನುವುದು ತಿಳಿಸಿದ್ದರೂ, ಜೀಪ್ ಚಾಲಕ ಹುಚ್ಚಾಟ ಮೆರೆದಿದ್ದಾನೆ.
ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಸೇತುವೆ ದಾಟುವುದು ಅಪಾಯಕಾರಿ ಅಂತ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಆದರೆ ಜೀಪ್ ಚಾಲಕ ಬ್ಯಾರಿಕೇಡ್ ದಾಟಿ ಮುಂದೆ ಮುನ್ನುಗ್ಗಿದ್ದು, ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.
ವೇಗವಾಗಿ ಹರಿಯುತ್ತಿರುವ ನದಿಯಲ್ಲಿ ಜೀಪ್ ನದಿ ಹರಿವಿನ ವೇಗಕ್ಕೆ ನದಿಯತ್ತ ಜೀಪ್ ಎಳೆಯಲ್ಪಟ್ಟಿದೆ. ಜೀಪ್ ಚಾಲಕನ ಅದೃಷ್ಟ ಚೆನ್ನಾಗಿತ್ತು. ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಮಳೆಯಿಂದ ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿವೆ. ಆದರೂ ಗೊತ್ತಿದ್ದೂ ಜನರು ಹುಚ್ಚುಸಾಹಸಕ್ಕೆ ಇಳಿಯುತ್ತಿರುವುದು ದುರಾದೃಷ್ಟಕರ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: