ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣರನ್ನು ಕಂಡರೆ ಯಾಕಿಷ್ಟು ಉರಿ? - Mahanayaka

ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣರನ್ನು ಕಂಡರೆ ಯಾಕಿಷ್ಟು ಉರಿ?

rashmika mandanna
16/01/2023

ರಶ್ಮಿಕಾ ಮಂದಣ್ಣ ಹೆಸರು ಕೇಳಿದ್ರೆನೇ ಕೆಲವರಿಗೆ ಸಹಿಸಲಾರದ ಉರಿ, ಆಕೆ ಏನು ಹೇಳಿದರೂ ಅದು ತಪ್ಪು ಎಂದು ಬೊಟ್ಟು ಮಾಡಿ ತೋರಿಸುವ ಒಂದು ಗುಂಪೇ ಇಲ್ಲಿದ್ದಾರೆ. ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣನೇ ತಪ್ಪಾಗಿದ್ದಾರೆ ಅಂತ ಜನ ತಿಳಿದುಕೊಂಡಿದ್ರು, ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರನ್ನು ವಿರೋಧಿಸಲೇ ಬೇಕು ಅಂತ ಕೆಲವರು ವಿರೋಧಿಸುತ್ತಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.

ರಶ್ಮಿಕಾ ಮಂದಣ್ಣ ದೇಶದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ, ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ರಶ್ಮಿಕಾ ಮಂದಣ್ಣ ಅವರ ಹವಾ ಇದೆ. ಅವರು ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಕಿರಿಯ ವಯಸ್ಸಿನಲ್ಲೇ ಅತ್ಯಂತ ಅನುಭವದ ನಟನೆಯಿಂದಾಗಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಲೇ ಹೋಗುತ್ತಿದೆ. ಜಾಹೀರಾತುಗಳಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರಿಗೆ ಹೆಚ್ಚಿನ ಬೇಡಿಕೆ ಇದೆ. ಇವೆಲ್ಲವೂ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇದು ರಶ್ಮಿಕಾ ಮಂದಣ್ಣ ಮೇಲಿನ ಅಸೂಯೆ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ.

ರಶ್ಮಿಕಾ ಮಂದಣ್ಣ ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ 7 ವಿವಿಧ ಭಾಷೆಗಳಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಅದರಲ್ಲಿ ಕನ್ನಡಕ್ಕೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆ. ಈ ಮೂಲಕ ಒಳ್ಳೆಯ ಮನಸ್ಸಿನ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಆದರೆ ಕೆಲವು ವಿರೋಧಿಸಲೇ ಬೇಕು ಅಂತ ವಿರೋಧಿಸುವವರು ರಶ್ಮಿಕಾ ಮಂದಣ್ಣ ವಿರುದ್ಧ ಮತ್ತೆ ಅಸಭ್ಯ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾರೆ.


Provided by

ರಶ್ಮಿಕಾ ಮಂದಣ್ಣ ಅವರ ಮದುವೆಯ ವಿಚಾರದಿಂದ ಆರಂಭವಾದ ತಪ್ಪು ಕಲ್ಪನೆಗಳು ಇಲ್ಲಿಯವರೆಗೂ ರಶ್ಮಿಕಾ ಅವರನ್ನು ಬೆನ್ನಟ್ಟುತ್ತಲೇ ಇದೆ. ಮದುವೆ ವಿಚಾರದಲ್ಲಿ ಬಂದ ಭಿನ್ನಭಿಪ್ರಾಯಗಳನ್ನು ಎರಡೂ ಕುಟುಂಬಸ್ಥರು  ಮಾತನಾಡಿ ಬಗೆ ಹರಿಸಿಕೊಂಡಿದ್ದಾರೆ. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪೂರ್ವಪರಗಳನ್ನು ತಿಳಿಯದೇ, ಕನ್ನಡದ ಒಬ್ಬಳು ಅದ್ಭುತ ಪ್ರತಿಭೆಯನ್ನು ಇಂದಿಗೂ ದೂಷಿಸುತ್ತಾ, ಆಕೆಗೆ ಕೆಟ್ಟದ್ದು ಬಯಸುತ್ತಾ ಇರುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ