ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ - Mahanayaka

ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ

sharath
04/07/2025

ಚಿಕ್ಕಮಗಳೂರು:  ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆಯಾಗಿರುವ ಘಟನೆ ಸಖರಾಯಪಟ್ಟಣ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ನಡೆದಿದೆ.

ಶರತ್ (33) ಮೃತ ಫಾರೆಸ್ಟ್ ಗಾರ್ಡ್ ಆಗಿದ್ದು,  ಕಳೆದೊಂದು ವಾರದಿಂದ ಕಡೂರು ತಾಲೂಕಿನ ಸಖರಾಯಪಟ್ಟಣದ ಅರಣ್ಯದಲ್ಲಿ ಈತನಿಗಾಗಿ ಪೊಲೀಸರು–ಅರಣ್ಯ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು.

ಇಂದು ಸಖರಾಯಪಟ್ಟಣ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಪತ್ತೆಯಾಗಿದೆ. ಹುಡುಕಾಟದ ವೇಳೆ  ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಷನ್ ನಲ್ಲಿ ಆತನ ಬೈಕ್, ಜರ್ಕಿನ್ ಪತ್ತೆಯಾಗಿತ್ತು.

ಮೃತ ಶರತ್ ಮೂಲತಃ ಮಡಿಕೇರಿ ಮೂಲದ ವ್ಯಕ್ತಿಯಾಗಿದ್ದಾರೆ.  ದೇಹ ಕೊಳೆತಿರುವ ಹಿನ್ನೆಲೆ ಪೊಲೀಸರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು.

ಶರತ್ ನಾಪತ್ತೆಯಾಗಿರುವ ಗಿನ್ನೆಲೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಇದೀಗ ಶರತ್ ನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ