ಚಿಕ್ಕಮಗಳೂರು: ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವಕರ ಗಲಾಟೆ; ಕಾಲಿನಿಂದ ಮುಖಕ್ಕೆ ತುಳಿದು ಅಟ್ಟಹಾಸ! - Mahanayaka

ಚಿಕ್ಕಮಗಳೂರು: ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವಕರ ಗಲಾಟೆ; ಕಾಲಿನಿಂದ ಮುಖಕ್ಕೆ ತುಳಿದು ಅಟ್ಟಹಾಸ!

12/06/2026

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಯುವಕರ ಗುಂಪೊಂದು ಮಧ್ಯರಾತ್ರಿ ನಡುರಸ್ತೆಯಲ್ಲೇ ಭೀಕರವಾಗಿ ಹೊಡೆದಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಪ್ರಮುಖ ರಸ್ತೆಯಾದ ಐ.ಜಿ. ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಈ ಹೈಡ್ರಾಮಾ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕಾಗಿ ಯುವಕರ ಎರಡು ಗುಂಪುಗಳ ನಡುವೆ ‘ಮಿಡ್ ನೈಟ್ ಫೈಟಿಂಗ್’ ನಡೆದಿದೆ ಎನ್ನಲಾಗಿದೆ.

ಯುವಕರ ಗುಂಪು ರಸ್ತೆ ಮಧ್ಯದಲ್ಲೇ ತಮ್ಮ ಬೈಕ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಗಲಾಟೆ ತಾರಕಕ್ಕೇರಿದಾಗ, ಯುವಕರ ಗುಂಪೊಂದು ಒಬ್ಬಂಟಿ ಯುವಕನನ್ನು ರಸ್ತೆಯಲ್ಲೇ ಕೆಳಗೆ ಹಾಕಿ ಮನಬಂದಂತೆ ತುಳಿದಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಹಲ್ಲೆಕೋರರು, ಆತ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರೂ ಅಮಾನವೀಯವಾಗಿ ಕಾಲಿನಿಂದ ಮುಖಕ್ಕೆ ತುಳಿದು ವಿಕೃತಿ ಮೆರೆದಿದ್ದಾರೆ.

ಯುವಕರ ಈ ಭೀಕರ ಹೊಡೆದಾಟದ ದೃಶ್ಯಗಳು ನೋಡುವವರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. ಸದ್ಯ ಈ ಇಡೀ ಘಟನೆಯ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಧ್ಯರಾತ್ರಿ ಸಾರ್ವಜನಿಕ ರಸ್ತೆಯಲ್ಲೇ ಇಷ್ಟೊಂದು ಭೀಕರವಾಗಿ ಹೊಡೆದಾಡಿಕೊಳ್ಳಲು ಯುವಕರ ನಡುವಿನ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸಾರ್ವಜನಿಕ ವಲಯದಲ್ಲಿ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಗರದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ