ಕನ್ವರ್ ಯಾತ್ರೆ ವೇಳೆ ನಡೀತು ಹಲ್ಲೆ: ಯಾತ್ರಿಕರಿಂದ ಮುಸ್ಲಿಂ ಚಾಲಕನಿಗೆ ಥಳಿತ
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಯ ಮಧ್ಯೆ ಮುಸ್ಲಿಂ ಚಾಲಕನಿಗೆ ಯಾತ್ರಿಕರು ತೀವ್ರವಾಗಿ ಥಳಿಸಿದ ಘಟನೆ ವರದಿಯಾಗಿದೆ. ಮುಜಫರ್ ನಗರದ ಚಪ್ಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇವರ ಕಾರನ್ನು ಬಹುತೇಕ ದ್ವಂಸಗೊಳಿಸಲಾಗಿದೆ.
ಗಂಗಾ ನದಿಯಿಂದ ನೀರನ್ನು ಕೊಂಡು ಹೋಗುವ ಈ ಕಣ್ವರ್ ಯಾತ್ರಿಕರಿಗೆ ಈ ಕಾರು ಡಿಕ್ಕಿಯಾಗಿದೆ ಎಂದು ಆರೋಪಿಸಿ ಥಳಿಸಲಾಗಿದೆ . ಆದರೆ ಈ ಆರೋಪವನ್ನು ಚಾಲಕ ಆಕಿಬ್ ನಿರಾಕರಿಸಿದ್ದಾರೆ. ಯಾವ ಯಾತ್ರಿಕರಿಗೂ ಕಾರು ಡಿಕ್ಕಿಯಾಗಿಲ್ಲ ಮತ್ತು ಸುಳ್ಳು ಆರೋಪ ಹೊರಿಸಿ ಕಾರು ಜಖಂಗಳಿಸಲಾಗಿದೆ ಮತ್ತು ತನಗೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದವರು ಹೇಳಿದ್ದಾರೆ. ಪೊಲೀಸ್ ಎಫ್ಐಆರ್ ನಲ್ಲೂ ಇದು ದಾಖಲಾಗಿದೆ. ಪೊಲೀಸರು ಅಪರಿಚಿತ 10 ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಈ ಘಟನೆಯ ಸಿಸಿಟಿವಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಕೆಲವು ಯುವಕರು ಕಾರನ್ನು ಜಖಂಗೊಳಿಸುತ್ತಿರುವುದು ಮತ್ತು ಚಾಲಕನನ್ನು ಥಳಿಸುತ್ತಿರುವುದು ವಿಡಿಯೋದಲ್ಲಿದೆ. ಈ ಸಂದರ್ಭದಲ್ಲಿ ಪೊಲೀಸರ ಉಪಸ್ಥಿತಿ ಇರುವುದು ಕೂಡ ವಿಡಿಯೋದಲ್ಲಿ ವ್ಯಕ್ತವಾಗಿದೆ. ಇವರ ಥಳಿತದಿಂದ ರಕ್ಷಣೆ ಹೊಂದುವುದಕ್ಕಾಗಿ ಚಾಲಕ ಹತ್ತಿರದ ರೆಸ್ಟೋರೆಂಟ್ ಗೆ ನುಗ್ಗುವುದು ಮತ್ತು ಇವರು ಆತನನ್ನು ಹಿಂಬಾಲಿಸಿ ಅಲ್ಲೂ ಹೊಡೆಯುವುದು ವಿಡಿಯೋದಲ್ಲಿದೆ.
ಯಾತ್ರಿಕರಿಗೆ ಡಿಕ್ಕಿ ಹೊಡೆದ ಬಗ್ಗೆ ಸಾಕ್ಷ ತೋರಿಸಿ ಎಂದು ಹೇಳಿದಾಗ ಅದಕ್ಕೆ ಯಾವುದೇ ಉತ್ತರವನ್ನು ಯಾಂತ್ರಿಕರು ನೀಡಿಲ್ಲ ಎಂದು ಪೊಲೀಸ್ ಎಫೈಯರ್ ನಲ್ಲಿ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಕಾರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth